ಸುದ್ದಿ ಕನ್ನಡ
ಈ ಜಿಲ್ಲೆಯಲ್ಲಿ ಕೆಲ ದಿನಗಳಿಂದ ಅತ್ಯಂತ ಚರ್ಚೆಯಲ್ಲಿರುವ ಮತ್ತು ಜನ ಆತಂಕಿತರಾಗಿರುವ ಸಂಗತಿಯಾದ ನದಿ ತಿರುವು ಪ್ರಸ್ತಾಪದ ಬಗ್ಗೆ ಏನು ನಡೆಯುತ್ತಿದೆ ಎಂಬ ಬಗ್ಗೆ ನಾನು ಅರಿತುಕೊಂಡಿದ್ದೇನೆ.ಹಲವರು ನನ್ನ ಬಳಿ ಗಮನಕ್ಕೂ ತಂದಿದ್ದಾರೆ.
ಸೋಂದಾ ಸ್ವಾಮೀಜಿಯವರ ನೇತೃತ್ವದಲ್ಲಿ ಈ ಜಿಲ್ಲೆಯ ಪರಿಸರ ಉಳಿಸುವ ನಿಟ್ಟಿನಲ್ಲಿ ಈ ಯೋಜನೆ ವಿರೋಧ ನಡೆಯುತ್ತಿದ್ದು ಈ ಜಿಲ್ಲೆಗೆ ಈ ಭಾಗಕ್ಕೆ ಅನ್ಯಾಯವಾಗಬಾರದೆಂಬ ಜಿಲ್ಲೆಯ ಜನರ ಭಾವನೆ ಅರ್ಥವಾಗಿದೆ.ಜನರ ಈ ನಿಲುವನ್ನು ನಾನೊಬ್ಬ ಈ ಜಿಲ್ಲೆಯ ಉಸ್ತುವಾರಿಮಂತ್ರಿಯಾಗಿ ಸರಕಾರದ ಸಂಬಂದಿಸಿದ ಮಂತ್ರಿಗಳಿಗೆ ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತರುವ ಕೆಲಸವನ್ನು ಮಾಡುತ್ತೇನೆ ಎಂದು ಉ.ಕ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ತಿಳಿಸಿದರು.
ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ರಜಾಸೇವೆ ಆಂದೋಲನ ಸಭೆಯ ಮುಕ್ತಾಯದ ಸಂದರ್ಭದಲ್ಲಿ ಈ ವಿಷಯವನ್ನುಪ್ರತ್ಯೇಕವಾಗಿ ಉಲ್ಲೇಖಿಸಿ ಅವರು ಮಾತನಾಡಿದರು.ಈಗಾಗಲೇ ಸ್ವರ್ಣವಲ್ಲೀ ಪೂಜ್ಯರು ಹೋರಾಟ ನಡೆಸಿದ್ದಾರೆ.ಹಾವೇರಿ ಗದಗ ಭಾಗದ ಮಠಾಧೀಶರು ಇಲ್ಲಿಯ ಬಗ್ಗೆ ತಿಳಿದುಕೊಂಡು ಹೋಗಿದ್ದಾರೆ.ಅದೇನೆ ಇದ್ದರು ಇಲ್ಲಿಯ ನೀರು ಪರಿಸರ ರಕ್ಷಿಸಿಕೊಳ್ಳಬೇಕಾದ್ದು ನಿಮ್ಮ ಕರ್ತವ್ಯ.ಜೊತೆಗೆ ನಮ್ಮದು ಜವಾಬ್ದಾರಿ ಇದೆ.ಈ ಜಿಲ್ಲೆಯ ಪರಿಸರ ರಕ್ಷಣೆಯಾಗಬೇಕು.ಈ ಯೋಜನೆ ಜಿಲ್ಲೆಗೆ ಬೇಡ ಎಂಬ ಮಾತನ್ನು ಈ ಜಿಲ್ಲೆಯ ನಮ್ಮ ಶಾಸಕರಾದ ಶಿರಸಿಯ ಭೀಮಣ್ಣ ನಾಯ್ಕ್ ಮತ್ತು ಯಲ್ಲಾಪುರದ ಶಾಸಕ ಶಿವರಾಮ ಹೆಬ್ಬಾರ್ ನಮ್ಮ ಬಳಿ ಹೇಳಿಕೊಂಡಿದ್ದಾರೆ. ಅಲ್ಲದೇ ಪಕ್ಷಾತೀತವಾಗಿ ಜಿಲ್ಲೆಯ ಎಲ್ಲ ಶಾಸಕ ಜನಪ್ರತಿನಿಧಿಗಳು ಜಿಲ್ಲೆಯ ಹಿತದ ದೃಷ್ಠಿಯಿಂದ ವಿರೋಧಿಸಿದ್ದಾರೆ. ಇವರೆಲ್ಲರ ಮತ್ತು ಜನಗಳ ಮತ್ತು ಮಠಾಧೀಶರುಗಳ ಈ ನಿರ್ಧಾರವನ್ನು ನಾನು ಸರಕಾರದ ಗಮನಕ್ಕೆ ತರಬಯಸುವ ಕೆಲಸವನ್ನು ಖಂಡಿತ ಮಾಡುತ್ತೇನೆ ಎಂದು ಹೇಳಿದರು.
———
*ವಿಮಾನ ಹಾರಾಟ ಆತಂಕ ದ ಸಾತೊಡ್ಡಿ ಪ್ರಶ್ನೆಗೆ*
*ಪೋಲಿಸ್ ವರಿಷ್ಠಾಧಿಕಾರಿಯಿಂದ ಬಂತು* ತಟ್ಟನೇ ಉತ್ತರಃ
*
ಇದೇ ಸಂದರ್ಭದಲ್ಲಿ ವಿಶೆಷವಾಗಿ ಬೇಡ್ತಿ ತಟ ಉಳಿದಂತೆ ಜಿಲ್ಲೆಯ ಕೆಲ ಭಾಗದಲ್ಲಿ ಕಳೆದ ೧೫-೨೦ ದಿನಗಳಿಂದ ಅತೀ ಕೆಳಮಟ್ಟದಲ್ಲಿ ವಿಮಾನ ಹಾರಾಡುತ್ತಿದ್ದು ಜನಕ್ಕೆ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಇದರಿಂದಲೂ ಜನ ಆತಂಕಿತರಾಗಿದ್ದಾರೆ ಎಂದು ಉಸ್ತುವಾರಿ ಸಚಿವರ ಬಳಿ ಸಭೆಯಲ್ಲಿ ನರಸಿಂಹ ಸಾತೊಡ್ಡಿ ಕೇಳಿದ ಪ್ರಶ್ನೆಗೆ ಅಲ್ಲೇ ಇದ್ದ ಪೋಲಿಸ್ ವರಿಷ್ಠಾಧಿಕಾರಿ ದೀಪನ್ ಎನ್ ಪ್ರತಿಕ್ರಿಯಿಸಿ ಇದು ಈಗ ಇರುವ ಮಾಹಿತಿ ಪ್ರಕಾರ ವಿಮಾನ ಹಾರಾಡುತ್ತಿರುವುದು Geological Survey of India ಅವರ ವತಿಯಿಂದ ನಡೆಯುತ್ತಿರುವ ಖನಿಜ ಸಂಪನ್ಮೂಲಗಳ ಸರ್ವೆ ವಿಷಯಕ್ಕೆ ಸಂಬಂದಿಸಿ ಹಾರಾಡುತ್ತಿದೆ ಎಂಬ ಬಗ್ಗೆ ಮಾಹಿತಿ ನಮಗಿದೆ.ಇದು ಇಲ್ಲಿ ಮಾತ್ರ ಅಲ್ಲ ದೇಶದ ನಾಲ್ಕು ರಾಜ್ಯಗಳಲ್ಲಿ ಈ ಸರ್ವೆಗಾಗಿ ವಿಮಾನ ಹಾರಾಟ ನಡೆದಿದೆ ಎಂದು ಸ್ಪಷ್ಟಪಡಿಸಿದರು.ಈ ಕುರಿತು ಸಾರ್ವಜನಿಕರಿಗೆ ಮಾದ್ಯಮದ ಮೂಲಕವೇ ಅಧೀಕೃತ ಮಾಹಿತಿ ನೀಡುವುದಾಗಿ ತಿಳಿಸಿದರು.ಸಚಿವರು ಕೂಡಲೇ ಸ್ಪಷ್ಟ ಮಾಹಿತಿ ನೀಡುವಂತೆ ವರಿಷ್ಠಾಧಿಕಾರಿಗಳಿಗೆ ಆದೇಶಿಸಿದರು.
