Banner Ad

ಸುದ್ದಿ ಕನ್ನಡ ವಾರ್ತೆ

. ಜೋಯಿಡಾ ತಾಲೂಕಿನ ಕುಣಬಿ ಸಮಾಜ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಜೊಯಿಡಾ ವತಿಯಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಿ.ಟಿ. ನಾಯ್ಕ ಅಧ್ಯಕ್ಷತೆಯಲ್ಲಿ ‘ಸಂಘಟನ ಸೃಜನ್ ಅಭಿಯಾನ–2ರ” ಪೂರ್ವಭಾವಿ ಸಭೆ ನಡೆಯಿತು.

Banner Ad

ಸಭೆ ಯಲ್ಲಿ ಮಾತನಾಡಿದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಶಾಸಕ ಆರ್ ವಿ ದೇಶಪಾಂಡೆ ಅವರು ಕಾರ್ಯಕರ್ತರು ಇಲ್ಲದೇ ಪಕ್ಷ ಇರುವುದಿಲ್ಲ. ತಳ ಮಟ್ಟದಲ್ಲಿ ಕಾರ್ಯಕರ್ತರನ್ನು ಗುರುತಿಸಬೇಕು, ಆ ಮೂಲಕ ಪಕ್ಷ ಸಂಘಟನೆ ಮಾಡಬೇಕು ಎಂದರು.

ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಜಿ ಟಿ ನಾಯ್ಕ ಮಾತನಾಡಿ ಪಕ್ಷದ ಸಂಘಟನೆ ಬಲವರ್ಧನೆ, ತಳಮಟ್ಟದಲ್ಲಿ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸುವುದು ಹಾಗೂ ಮುಂದಿನ ಚುನಾವಣಾ ಕಾರ್ಯತಂತ್ರ ರೂಪಿಸಿ ಪಕ್ಷ ಬಲಗೊಳಿಸಬೇಕಾಗಿದೆ. ಇದಕ್ಕೆ ಕಾರ್ಯಕರ್ತರ ಸಹಕಾರ ಅಗತ್ಯ ಎಂದರು.

ಕೆಪಿಸಿಸಿ ಸದಸ್ಯ ಸದಾನಂದ ದಬಗಾರ ಮಾತನಾಡಿ ಈ ಕ್ಷೇತ್ರದಲ್ಲಿ ದೇಶಪಾಂಡೆ ಸಾಹೇಬರಿಂದ ಅಭಿವೃದ್ಧಿ ಯಗ ಪ್ರಾರಂಭವಾಗಿದೆ. ಈ ವಿಸ್ತೀರ್ಣವಾದ ತಾಲೂಕಿನಲ್ಲಿ ಪಕ್ಷ ಸಂಘಟನೆಗೆ ಸವಾಲಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರುತಿ ಪಾಟೀಲ, ಕೆಪಿಸಿಸಿ ಸದಸ್ಯ ಸದಾನಂದ ದಬಗಾರ, ಮಾಜಿ ತಾ.ಪಂ.ಉಪಾಧ್ಯಕ್ಷ ವಿಜಯ ಪಂಡಿತ್ , ಮಹಿಳಾ ಅಧ್ಯಕ್ಷೆ ಸುಕನ್ಯಾ ದೇಸಾಯಿ, ಪ್ರಮುಖರಾದ ಅರುಣ್ ದೇಸಾಯಿ, ಯುವ ಅಧ್ಯಕ್ಷ ಅಕ್ಷಯ್ ರಾವಳ್, ಪ್ರಭಾವತಿ ಪಾಟೇಕರ್, ಮಂಗೇಶ ಕಾಮತ, ರವಿ ರೆಡ್ಕರ್,ಶ್ರೀಧರ ದಬಗಾರ, ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.

Banner Ad