ಸುದ್ದಿ ಕನ್ನಡ ವಾರ್ತೆ
ಜೋಯಿಡಾ ದಲ್ಲಿ ಬಿರುಗಾಳಿಯ ಹಾವಳಿಗೆ ಅನೇಕ ಮರ ಗಿಡಗಳು ಬಿದ್ದು ಸಂಚಾರಕ್ಕೆ ಮತ್ತು ವಿದ್ಯುತ್ ವಿತರಣೆಗೆ ಸಮಸ್ಯೆ ಆಗಿದೆ. ಮಳೆ ಅಷ್ಟೇನು ಜೋರಾಗಿ ಬೀಳದಿದ್ದರೂ ಗಾಳಿ ಮಾತ್ರ ತುಂಬಾ ಬಿರುಸಾಗಿ ಬೀಸುತ್ತಿದೆ, ಇದರಿಂದಾಗಿ, ಅಲ್ಲಲ್ಲಿ ಮನೆ ಸೀಟ್ ಗಳು, ಹಾರಿದರೆ, ಮರದ ಬುಡದಲ್ಲಿ ಮನೆ ಕಟ್ಟಿಕೊಂಡವರ ಮನೆ ಮೇಲೆ ಮರಬಿದ್ದು, ಹಾನಿ ಯಾಗಿವೆ, ಎಂದು ಹೇಳಲಾಗುತ್ತಿದೆ.
ಆದರೆ ಕಂದಾಯ ಇಲಾಖೆ ಅಧಿಕೃತ ವಾಗಿ ಯಾವುದೇ ಮಾಹಿತಿಯನ್ನು ನೀಡಿಲ್ಲ, ಬಿರುಗಾಳಿಯ ರಬಸ ಊಹಿಸಲಿಕ್ಕೂ ಸಾಧ್ಯವಿಲ್ಲ ದಂತೆ ಬೀಸುತ್ತಿದೆ ಇದರಿಂದ ರೈತರ ಹಲವಾರು, ಅಡಿಕೆ ತೆಂಗಿನ ಮರಗಳು ನೆಲಕಚ್ಚಿವೆ ಹೀಗಾಗಿ ರೈತರು ಆತಂಕ ದಲ್ಲೇ ದಿನ ದೂಡುವಂತಾಗಿದೆ, ಅಡಿಕೆ ಸಿಂಗಾರ ಒಣಗಿ ಈಗ ಕೊಳೆಯುತ್ತಿದೆ, ತೆಂಗಿನಕಾಯಿ ಗಳನ್ನು ಮಂಗ, ಅಳಿಲು ಗಳು ಹಾಳು ಮಾಡುತ್ತಿವೆ, ಜೊತೆಗೆ ಈಗ ಬರುತ್ತಿರುವ ಗಾಳಿಗೆ ಅಡಿಕೆ ಇರುವ ಮರಗಳು ಕೂಡ ಬಿದ್ದು ರೈತರಿಗೆ ನೋವು ತಂದಿವೆ, ಈ ಅಡಿಕೆ ಮಿಡಿಗಳು ತುಂಬಾ ಎಳೆತು ಇರುವ ಕಾರಣ ಏನು ಮಾಡಲು ಆಗೋದಿಲ್ಲ ಎಂದು ರೈತರು ಹೇಳುತ್ತಾರೆ.
ಮುಂದುವರೆದಿರುವ ಬಿರುಗಾಳಿ , ಇನ್ನೂ ಎರಡು ದಿನಗಳಕಾಲ ಜಿಲ್ಲೆಗೆ ಅರೇಂಜ್ ಅಲರ್ಟ್ ನ್ನು ಹವಾಮಾನ ಇಲಾಖೆ ಹಾಗಿದೆ, ಇದರಿಂದ ಜಿಲ್ಲೆಯ ಜನತೆಗೆ ಎಚ್ಚರಿಕೆ ನೀಡಿದಂತಾಗಿದೆ.ಮಳೆ ಗಾಳಿಯ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದು ಒಳ್ಳೆಯದು ಎಂದು ಹೇಳಲಾಗಿದೆ. ಆದರೆ ವಿವಿಧ ಕೆಲಸ ಕಾರ್ಯ ಗಳಿಗೆ ಬೇಕಾದ ನೆಟ್ವರ್ಕ್ ಇಲ್ಲದೇ, ವಿದ್ಯುತ್ ಇಲ್ಲದೇ ಮೊಬೈಲ್ ಚಾರ್ಜ್ ಗೆ ಜನರು ಕಂಡ ಕಂಡ ವರ ಮನೆ ಬಾಗಿಲಿಗೆ ಓಡಾಡುವಂತಾಗಿದೆ.
