ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಪ್ರೌಢಶಾಲೆ ಗುಂದ ಇಲ್ಲಿನ ವಿದ್ಯಾರ್ಥಿನಿ ನಿಖಿತಾ ಮಹಾದೇವ ವೇಳಿಪ ಇವಳು ದಿನಾಂಕ 5/10/2026 ರಂದು ಶಿರಸಿ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ನಡೆದ
ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಜಿಲ್ಲೆಗೆ ತೃತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ವಿದ್ಯಾರ್ಥಿನಿಗೆ ಗುಂದ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಫಕೀರಪ್ಪ ದರಿಗೊಂಡ ಅವರು ಸಹಕಾರ,ಮಾರ್ಗದರ್ಶನ ಮಾಡಿದ್ದರು.ವಿದ್ಯಾರ್ಥಿನಿಯ ಸಾಧನೆಗೆ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಜೋಸಫ್ ಸರ್,ಸಹ ಶಿಕ್ಷಕರಾದ ಗೋಕುಲ್ ಸ್ಥಳೇಕರ, ಪುರುಷೋತ್ತಮ ಜಿ,ನವೀನ್ ಶೇಟ್,ಬಸವರಾಜ,ದಿವ್ಯಾ ಮೇಡಂ,ರಿಯಾ,ಭೋಧಕೇತರ ಸಿಬ್ಬಂದಿ ಸದಾನಂದ ವೇಳಿಪ, ಪ್ರೌಢಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು,ಉಪಾಧ್ಯಕ್ಷರು,ಸರ್ವ ಸದಸ್ಯರು,ಪಾಲಕ-ಪೋಷಕರು,ಊರಿನ ಗ್ರಾಮಸ್ಥರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.
