ಸುದ್ದಿ ಕನ್ನಡ ವಾರ್ತೆ
ಜೊಯಿಡಾ; ತಾಲೂಕಿನಲ್ಲಿ ರಚನೆಯಾದ ವೃಕ್ಷ ಪ್ರಾಧಿಕಾರಕ್ಕೆ ಹಿಂದುಳಿದ ಕುಣಬಿ ಜನಾಂಗದ ಸಸ್ಯಶಾಸ್ತ್ರ ಪೂರೈಸಿದ ಸುದರ್ಶನ್ ಗಾವಡಾ ಅವರನ್ನು ಆಯ್ಕೆ ಮಾಡಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆನರಾ ವೃತ್ತ ಶಿರಸಿ ರವರು ಆದೇಶ ಮಾಡಿರುತ್ತಾರೆ.
ಕರ್ನಾಟಕ ವೃಕ್ಷ ಸಂರಕ್ಷಣಾ ಅಧಿನಿಯಮ 1976 ಸಬ್ ಸೆಕ್ಷನ್ 1ರ ಅನ್ವಯ ರಾಜ್ಯದಲ್ಲಿ ಮರಗಳ ಸಂರಕ್ಷಣೆಗಾಗಿ ಮರಗಳ ಪ್ರಾಧಿಕಾರ ರಚನೆಗೊಂಡಿದೆ. ಇದರಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆನರಾ ವೃತ್ತ ಇವರು ಅಧ್ಯಕ್ಷರು, ಮತ್ತು ಜಂಟಿ ನಿರ್ದೇಶಕ ತೋಟಗಾರಿಕೆ ಇಲಾಖೆ ಉ.ಕ, ಸುಪರಿಡೆಂಟ್ ಇಂಜಿನಿಯರ್ ಧಾರವಾಡ ಲೋಕೋಪಯೋಗಿ ಇಲಾಖೆ, ಚಿಪ್ ಆಪಿಸರ್ ತಾಲೂಕು ಪಂಚಾಯತ್,ಜೊಯಿಡಾ ಸುದರ್ಶನ್ ಸುಭಾಷ್ ಗಾವಡಾ, ಅಸಿಸ್ಟೆಂಟ್ ಪ್ರೊಫೆಸರ್ ಸಸ್ಯಶಾಸ್ತ್ರ ಸರ್ಕಾರಿ ಪದವಿ ಪೂರ್ವ ಕಾಲೇಜು ಕುಂಬಾರವಾಡಾ, ಇವರು ವೃಕ್ಷ ಪ್ರಾಧಿಕಾರ ಸಮಿತಿ ಸದಸ್ಯರು ಆಗಿರುತ್ತಾರೆ. ಎಂದು ಸೆಪ್ಟೆಂಬರ್ 21-2026 ರಂದುಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆನರಾ ವೃತ್ತ ಶಿರಸಿ ಇವರು ಹೊರಡಿಸಿದ ಆದೇಶ ದಲ್ಲಿ ಹೇಳಲಾಗಿದೆ.
