ಸುದ್ದಿ ಕನ್ನಡ ವಾರ್ತೆ

ಗುವಾಹಟಿ:ಭಾರತ ಹಾಗೂ ವೆಸ್ಟ್ ಇಂಡೀಸ್‌ ತಂಡಗಳ ನಡುವಿನ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟೀ ಇಂಡಿಯಾ 8 ವಿಕೇಟ್ ಗಳ ಭರ್ಜರಿಯಾದ ಜಯ ಸಾಧಿಸಿದೆ. ಟಾಸ್ ಗೆದ್ದ ಭಾರತ ತಂಡವು ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡ ಕಾರಣ,ವೆಸ್ಟ್ ಇಂಡೀಸ್‌ ತಂಡವು ಮೂವರು ಆಟಗಾರರ ಶತಕದ ನೆರವಿನಿಂದ 50 ಓವರ್ ಗಳಲ್ಲಿ 7 ವಿಕೇಟ್ ಗೆ 405 ರನ್ ಬೃಹತ್ ಮೊತ್ತ ಗಳಿಸಿತು.

 

405 ರನ್ ಗಳ ಬೃಹತ್ತಾದ ಗುರಿಯನ್ನು ಬೆನ್ನತ್ತಿದ ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮ ಅವರ ಭರ್ಜರಿಯಾದ ಶತಕ ಹಾಗೂ ನಾಯಕ ಶುಭಮನ್ ಗಿಲ್ ಅವರ 117 ಎಸೆತದಲ್ಲಿ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತಿ ವೇಗದ ದ್ವಿಶತಕ ಪೂರೈಸಿ ವಿಶ್ವ ದಾಖಲೆ ನಿರ್ಮಿಸಿ, ಅಜೇಯ 223 ರನ್ ಬಾರಿಸುವ ಮೂಲಕ ಟೀಂ ಇಂಡಿಯಾದ ಗೆಲುವಿಗೆ ಕಾರಣರಾದರು.

 

ಈ ಪಂದ್ಯದ ಗೆಲುವಿನೊಂದಿಗೆ ಟೀಂ ಇಂಡಿಯಾ ತಂಡವು 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು. ಸಂಕ್ಷಿಪ್ತ ಸ್ಕೋರ್:ವೆಸ್ಟ್ ಇಂಡೀಸ್‌ 50 ಓವರ್ ಗಳಲ್ಲಿ 7 ವಿಕೇಟ್ ಗೆ 405 ರನ್,ಟೀಂ ಇಂಡಿಯಾ 43.3 ಓವರ್ ಗಳಲ್ಲಿ 2 ವಿಕೇಟ್ ಗೆ 406 ರನ್. ಪಂದ್ಯ ಶ್ರೇಷ್ಠ:ಶುಭಮನ್ ಗಿಲ್.