ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ಜೋಯಿಡಾ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಅಂಗನವಾಡಿ ಮಿಲನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಅಡಿಯಲ್ಲಿ ಜೋಯಿಡಾದ ಅಮೃತ್ಪಾಲಿ ಅಂಗನವಾಡಿಯಲ್ಲಿ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಒಟ್ಟು ಮೂರು ಮಹಿಳೆಯರಿಗೆ ಸನ್ಮಾನ ಮಾಡಲಾಯಿತು.

ಸನ್ಮಾನಿತರ ವಿವರ:
1) ಮಾಲಾ ದತ್ತ ಸಿತನ್ನವರ. ಆಶಾ ಕಾರ್ಯಕರ್ತೆ
2) ರಮ್ಯ ರಮಕಾಂತ ವೇಳಿಪ. ಅಂಗನವಾಡಿ ಶಿಕ್ಷಕಿ
3) ಲಕ್ಷ್ಮೀ ಬಾಬು ಕರೋಶಿ. ಅಂಗನವಾಡಿ ಶಿಕ್ಷಕಿ
ಇವರನ್ನು ಗೌರವ ಯುತವಾಗಿ ಸನ್ಮಾನಿಸಲಾಯಿತು. ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಲಾಯಿತು ಕಾರ್ಯಕ್ರಮದಲ್ಲಿ ತಾಲೂಕಾ ಮಹಿಳಾ ಮೋರ್ಚಾದ ಅಧ್ಯಕ್ಷ ಶೋಭಾ ಎಲ್ಲೇಕರ್ ಅವರು ಈ ಅಭಿಯಾನದ ಉದ್ದೇಶ ಹಾಗೂ ಮೋಧಿಜಿಯರ ಆಡಳಿತದಲ್ಲಿ ಮಾಡಿದಂಥ ಸುಧಾರಣೆಗಳು ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ನೀಡಿದ ಯೋಜನೆಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಲಕ್ಷ್ಮಿ ಪೂಜಾರಿ, ಗುಲಾಬಿ ಸುರೇಶ್ ಕೋಟೆಕಲ್ ಪ್ರಧಾನ ಕಾರ್ಯದರ್ಶಿ ಅರುಣ್ ಕಾಮರೆಕರ ಸಿದ್ದು ಜೋಕೇರಿ, ಸಂತೋಷ ಸಾವಂತ, ಸುರೇಶ್ ಕೋಟೆಕಲ್. ಗಣೇಶ ವೇಳಿಪ ಹಾಗೂ ಅಮೃತ ಪಾಲಿ ಊರಿನ ಮಾತೆಯರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.