ಸುದ್ದಿ ಕನ್ನಡ ವಾರ್ತೆ
ಬೆಂಗಳೂರು-ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಶ್ರೀ ಮಧುಸೂದನ ಎಸ್. ನಾಯಕ, ಕಾರ್ಯದರ್ಶಿ ಶ್ರೀಮತಿ ಎಸ್. ಉರ್ಮಿಳಾ,ಸದಸ್ಯರಾದ,ಶಿಕ್ಷಣ ತಜ್ಞ ಡಾ. ಸಿ.ಎಂ.ಕುಂದಗೋಳ ಅವರು ಸೋಮವಾರ ದಿನಾಂಕ 28ರಂದು ಕೇಂದ್ರ ಬಸವ ಸಮಿತಿಯ ಆನುಭವ ಮಂಟಪದಲ್ಲಿರುವ *ಬಸವ ಅಂತರರಾಷ್ಟ್ರೀಯ ಮಾಹಿತಿ ಕೇಂದ್ರ* ಕ್ಕೆ ಭೇಟಿ ನೀಡಿ,ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಸವ ಸಮಿತಿಯ ಅಧ್ಯಕ್ಷರಾದ ಡಾ.ಅರವಿಂದ ಜತ್ತಿಯವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಮಧುಸೂದನ ನಾಯಕ ಅವರನ್ನು ಸನ್ಮಾನಿಸಿ, ಅಭಿನಂದಿಸಿದರು.
ಕೇಂದ್ರ ಬಸವ ಸಮಿತಿಯ ಹಿರಿಯ ಕಾರ್ಯಕಾರಿ ಸಮಿತಿಯ ಹಿರಿಯ ಸದಸ್ಯರಾದ ಶ್ರೀ ಮೋಹನ ಬಸನಗೌಡ ಪಾಟೀಲ, ಕಛೇರಿಯ ಆಡಳಿತ ಮತ್ತು ಪ್ರಕಟಣೆಯ ನಿರ್ದೇಶಕರಾದ ನಂಜಪ್ಪ,ಸಂಯೋಜಕರಾದ ಪ್ರೊ.ಜೆ.ವಿಶ್ವನಾಥ ಉಪಸ್ಥಿತರಿದ್ದರು.
