ಸುದ್ದಿ ಕನ್ನಡ ವಾರ್ತೆ

ಜೊಯಿಡಾ :ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತವು ಉತ್ತಮ ಆಡಳಿತದಿಂದ ಈಗಾಗಲೇ ಹಲವಾರು ಪ್ರಶಸ್ತಿ ಗಳನ್ನು ಪಡೆದು ಕೊಂಡಿದೆ. ಸ್ವಚ್ಛತೆ ಕೂಡ ಅದರಲ್ಲಿ ಒಂದು ಎಂದು ಪ್ರತಿವರ್ಷ ಪಂಚಾಯತ ದ ಎಂಟು ಗ್ರಾಮ ಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿದೆ.

ಅದರಂತೆ ನಾಳೆ ಅಕ್ಟೊಬರ್ 1ರಂದು ಸ್ವಚ್ಛತಾ ಹಿ ಸೇವಾ ಎಂದು ಸ್ವಚ್ಛತೆಯನ್ನು ಮಾಡುವ ಮೂಲಕ ಗಾಂಧೀಜಿ ಯವರ ಜಯಂತಿಗೆ ಸುಂದರ ಪರಿಸರ ನಿರ್ಮಾಣ ಮಾಡಲು ಸಜ್ಜಾಗಿದೆ ಹಾಗಾಗಿ, ಪ್ರಕಟಣೆ ಮೂಲಕ ಗ್ರಾಮಸ್ಥರನ್ನು ಈ ಮೂಲಕ ಆಹ್ವಾನಿಸಿದೆ. ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತ ಆಡಳಿತಾಧಿಕಾರಿಗಳು, ಪ್ರೌಢ ಶಾಲಾ ಶಿಕ್ಷಕ-ಶಿಕ್ಷಕಿಯರು, ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರು, ಬಾಲ ವಿಕಾಸ ಸಮಿತಿಯ ಅಧ್ಯಕ್ಷರು-ಸರ್ವ ಸದಸ್ಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಿಬ್ಬಂದಿ ವರ್ಗ, ಪಶು ವೈದ್ಯಾಧಿಕಾರಿಗಳು, ವಲಯ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ಮ್ಯಾನೇಜರ್ ಕೆ.ಜಿ.ಬಿ ಬ್ಯಾಂಕ್ ಶಾಖೆ ಗುಂದ ಹಾಗೂ ಸಿಬ್ಬಂದಿ ವರ್ಗ, ಮತ್ತು ಅಧ್ಯಕ್ಷರು ಹಾಗೂ ಸದಸ್ಯರು ದಿ. ನಂದಿಗದ್ದಾ ಸೇವಾ ಸಹಕಾರಿ ಸಂಘ ನಿ. ಯರಮುಖ ಮತ್ತು ಸಿಬ್ಬಂದಿ ವರ್ಗ, ಅಂಚೆ ಇಲಾಖೆಯ ಸಿಬ್ಬಂದಿ ವರ್ಗ, ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ದೂರವಾಣಿ ಸಂಪರ್ಕ ಕೇಂದ್ರದ ಸಿಬ್ಬಂದಿ ವರ್ಗ, ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಸದಸ್ಯರು, ಸಿಬ್ಬಂದಿ ವರ್ಗ, ಪತ್ರಕರ್ತರು, ಹೆಸ್ಕಾಂ ಸಿಬ್ಬಂದಿ ವರ್ಗ, ಯುವಕ ಹಾಗೂ ಯುವತಿ ಮಂಡಳದ ಅಧ್ಯಕ್ಷರು, ಸದಸ್ಯರು, ಕೈಸ್ತ ಸಮಾಜದ ಧರ್ಮಗುರುಗಳು ಹಾಗೂ ಸಾರ್ವಜನಿಕರಿಗೆ ಈ ಪತ್ರದ ಮೂಲಕ ತಿಳಿಯಪಡಿಸುವುದೇನೆಂದರೆ,

ದಿನಾಂಕ: 01/10/2026 ರಂದು ಬೆಳಿಗ್ಗೆ 10:00 ಗಂಟೆಗೆ ಸ್ವಚ್ಛತಾ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ. ಕಾರಣ ಸದರ ದಿನಾಂಕದಂದು ಸರಿಯಾದ ಸಮಯಕ್ಕೆ ಬಂದು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿ.ಎಂದು ಪ್ರಕಟಿಸಿದೆ.