ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ಕಾಳಿ ಹುಲಿ ಸಂಕ್ಷಿತ ಪ್ರದೇಶದ ದಾಂಡೇಲಿ ವಿಭಾಗಕ್ಕೆ ಒಳಪಡುವ ಜೋಯಿಡಾ ತಾಲೂಕಿನ ಫಣಸೋಲಿ ಆನೆ ಶಿಬಿರವು ಸೆಪ್ಟೆಂಬರ್ 28, 2026 ರಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳ್ಳಲಿದೆ. ಈ ಹಿಂದೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದ ಈ ಶಿಬಿರವನ್ನು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಆದೇಶದ ಮೇರೆಗೆ ಪುನಾರಂಭಿಸಲಾಗುತ್ತಿದೆ.
ಮಾನ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪಾಲಕರು ನೀಡಿರುವ ಅನುಮತಿ ಪತ್ರದ ಅನ್ವಯ (ಆಫೀಸ್ ಸಂಖ್ಯೆ: 2171717, ದಿನಾಂಕ: 22-09-2026) ಈ ತೀರ್ಮಾನ ಕೈಗೊಳ್ಳಲಾಗಿದೆ. ಸಾರ್ವಜನಿಕರು ಹಾಗೂ ಪ್ರಕೃತಿ ಪ್ರೇಮಿಗಳು ಈ ಸದವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ಕಾಳಿ ಹುಲಿ ಸಂಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
