ಸುದ್ದಿ ಕನ್ನಡ ವಾರ್ತೆ

ರಾಜ್ಯದಲ್ಲಿ ಸದ್ಯಕ್ಕೆ ಲೋಡ್ ಶೆಡ್ಡಿಂಗ್ ಪ್ರಶ್ನೆ ಇಲ್ಲ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ಸಾವಿರ ಮೆಗಾವ್ಯಾಟ್ ವಿದ್ಯು ಕೊರತೆÀ ಇದೆ. ನಾವು ಹೇಗೊ ಬೇರೆ ಬೇರೆ ರಾಜ್ಯಗಳಿಂದ ತೆಗೆದುಕೊಂಡು ನಿರ್ವಹಣೆ ಮಾಡುತ್ತಿದ್ದೇವೆ. ಕಳೆದ ಏಳು ತಿಂಗಳಿAದ ವಿದ್ಯುತ್ ಕೊರತೆ ಇದೆ. ಹಣ ಕೊಟ್ಟರು ಬೇರೆ ರಾಜ್ಯಗಳಿಂದ ಕೇಳಿದಷ್ಟು ಸಿಗುತ್ತಿಲ್ಲ. ದೇಶಾಧ್ಯಂತ ಈ ಸಮಸ್ಯೆ ಇದೆ.

ಮುಂದಿನ ದಿನಗಳಲ್ಲಿ ಪರಿಸ್ಥಿತಿ ಕೈ ಮೀರಿದರೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ಈಗ ನಾವು ಎಲ್ಲೂ ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ.
ಒಂದು ವಾರದ ಹಿಂದೆ ಸ್ವಲ್ಪ ಸಮಸ್ಯೆಯಾದ ಕಾರಣ ಒಂದೆರೆಡು ದಿನ ಸಮಸ್ಯೆಯಾಗಿತ್ತು. ಕೃಷಿ ಹಾಗೂ ಮನ ಬಳಕಗೆ ನಾವು ವಿದ್ಯುತ್ ಕೊಡುತ್ತಿದ್ದೇವೆ.
ಬೇರೆ ರಾಜ್ಯಗಳಿಂದ ಖರೀದಿ ಪ್ರಕ್ರಿಯೆ ನಿರಂತರವಾಗಿ ಸಾಗಿದೆ. ಉತ್ಪಾದನಾ ಘಟಕಗಳನ್ನ ಹೆಚ್ಚು ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ.ದಸರಾಗೆ ಯಾವ ವಿದ್ಯುತ್ ಕೊರತೆ ಆಗಲ್ಲ ಎಂದು ಹೇಳಿದರು.