ಸುದ್ದಿ ಕನ್ನಡ ವಾರ್ತೆ
ಚಾರ್ ಧಾಮ್ ಯಾತ್ರೆ ಮುಗಿಸಿ ಮನೆಗೆ ವಾಪಸ್ ಆಗಬೇಕಿದ್ದ ಬೆಂಗಳೂರಿನ ಐದು ಜನ ಪ್ರವಾಸಿಗರು ಉತ್ತರಾಖಂಡ ಜೋಶಿ ಮಟ್ ಬಳಿ ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಉತ್ತರಾಖಂಡ್ ದಾದ್ಯಂತ ಅವಮಾನ ಇಲಾಖೆಯು ಎಲ್ಲೋ ಅಲರ್ಟ್ ಘೋಷಿಸಿತ್ತು. ದಟ್ಟ ಮೋಡಕವಿದ ವಾತಾವರಣ ಹಾಗೂ ಮಂಜು ಮುಸುಕಿದಂತೆ ವಾತಾವರಣ ಇದ್ದರೂ ಹೆಲಿಕ್ಯಾಪ್ಟರ್ ಹಾರಾಟ ನಡೆಸಿದ್ದು ಈ ಅಪಘಾತಕ್ಕೆ ಕಾರಣವಾಗಿದೆ ಎಂದೇ ಹೇಳಲಾಗುತ್ತಿದೆ.

ಉತ್ತರಾಖಂಡನ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ಮಾಹಿತಿಯ ಪ್ರಕಾರ_ಶುಕ್ರವಾರ ಮಧ್ಯಾಹ್ನ ಹೆಲಿಕ್ಯಾಪ್ಟರ್ ಹಾರಾಟ ಆರಂಭಿಸಿ ಕೇವಲ ಎರಡೇ ನಿಮಿಷದಲ್ಲಿ ಅಂದರೆ 1. 14 ನಿಮಿಷಕ್ಕೆ ಹೆಲಿಕ್ಯಾಪ್ಟರ್ ವಾಯು ಸಂಚಾರ ನಿಯಂತ್ರಣ ಕೇಂದ್ರದಿಂದ ಸಂಪರ್ಕ ಕಳೆದುಕೊಂಡಿತ್ತು ಎನ್ನಲಾಗಿದೆ.

ಹೆಲಿಕ್ಯಾಪ್ಟರ್ ಪತನಗೊಂಡ ಸ್ಥಳ ದಟ್ಟ ಅರಣ್ಯ ವಾಗಿದ್ದು, ಆ ಸಮಯದಲ್ಲಿ ಮಳೆ ಸುರಿಯುತ್ತಿತ್ತು . ಈ ದುರ್ಘಟನೆಯಲ್ಲಿ ಐದು ಜನ ಪ್ರಯಾಣಿಕರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಇಂದು ಶನಿವಾರ ಮೃತರ ಮರಣೋತ್ತರ ಪರೀಕ್ಷೆಗಾಗಿ ಡೆಹರಾಡೂನ್ ಗೆ ಕರೆದೊಯ್ಯುವ ಸಾಧ್ಯತೆ ಇದೆ.

ಹವಾಮಾನ ವೈಪರಿತ್ಯದ ಮುನ್ನೆಚ್ಚರಿಕೆ ಇದ್ದರೂ ಕೂಡ ಹೆಲಿಕ್ಯಾಪ್ಟರ್ ಹಾರಾಟಕ್ಕೆ ಹೇಗೆ ಅನುಮತಿ ನೀಡಲಾಯಿತು ಎಂಬುದು ಪ್ರಶ್ನೆಯಾಗಿ ಉಳಿದಿದೆ.