Banner Ad

ಸುದ್ದಿ ಕನ್ನಡ ವಾರ್ತೆ

ಕರ್ನಾಟಕ ಸರಕಾರದ ಕಾಲೇಜು ಶಿಕ್ಷಣ ಇಲಾಖೆಯ ಕಾರ್ಯಕ್ರಮದಡಿಯಲ್ಲಿ ಜೋಯಡಾದ ಪ್ರಥಮ ದರ್ಜೆ ಕಾಲೇಜು ಮತ್ತು ಕಾಳಿ ಪ್ರವಾಸೋದ್ಯಮ ಸಂಸ್ಥೆ ಯ ಸಹಭಾಗಿತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಒಂದು ದಿನದ ಕಾರ್ಯಾಗಾರ ನಡೆಯಿತು.

Banner Ad

ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೇ ಉದ್ಘಾಟಿಸಿದರು ಅಧ್ಯಕ್ಷತೆಯನ್ನು ,ಪ್ರಾಚಾರ್ಯೆ ಶ್ರೀಮತಿ ಅಂಜಲಿ ರಾಣೆ ಇವರು ವಹಿಸಿದ್ದರು. ಕಾಳಿ ಪ್ರವಾಸೋದ್ಯಮ ಸಂಸ್ಥೆಯ ಸಂಸ್ಥಾಪಕ ರವಿ ರೇಡಕರ್, ಕಾರ್ಯದರ್ಶಿ ಸುದರ್ಶನ ಹೆಗಡೆ ಮಾಜಿ ಅಧ್ಯಕ್ಷರು ಗಳಾದ ನರಸಿಂಹ ಭಟ್, ವಿಲ್ಸನ್ ಡಾಯಸ್, ಡಾ.ಜಯಾನಂದ ಡೇರೆಕರ್, ಬಾಪೂಜಿ ಕಾಲೇಜಿನ ಪ್ರಾಚಾರ್ಯ ಮಂಜುನಾಥ್ ಶೆಟ್ಟಿ, ಸಂಜೀವನಿ ಸೇವಾ ಟ್ರಸ್ಟಿನ ಅಧ್ಯಕ್ಷ ಸುನೀಲ್ ದೇಸಾಯಿ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿ ಗಳಾಗಿ ಪರಿಸರ ತಜ್ಞ ಶರತ್ ಆನೆಗುಂದಿ, ಡಿಜಿಟಲ್ ಮಾರ್ಕೆಟಿಂಗ್ ನ ಪುನಿತ್ ಚೋಪಡೆ, ಜಂಗಲ್ ಲಾಜಿಸ್ ಮತ್ತು ರಿಸೊರ್ಟ್ ಸಂಸ್ಥೆಯ ಪ್ರಮೋದ್ ನಾಯ್ಕ್, ದಾಂಡೇಲಿ ಪ್ರವಾಸೋದ್ಯಮ ಸಂಸ್ಥೆಯ ಮಿಲಿಂದ ಕೊಡಕಣಿ ಆಗಮಿಸಿದ್ದರು.

ಸುಮಾರು ೭೦ ವಿದ್ಯಾರ್ಥಿಗಳು ಭಾಗವಹಿಸಿದ ಈ ಕಾರ್ಯಾಗಾರದಲ್ಲಿ ಜೋಯಡಾ ತಾಲ್ಲೂಕಿನಲ್ಲಿ ಪ್ರವಾಸೋದ್ಯಮಕ್ಕಿರುವ ಅವಕಾಶಗಳು, ಆವ್ಹಾನಗಳು, ಪರಂಪರಾಗತ ಆಹಾರ ಪದ್ಧತಿ, ಸಾಂಸ್ಕೃತಿಕ ಚಟುವಟಿಕೆಗಳು, ಮಾರ್ಕೆಟಿಂಗ್ ಕೌಶಲ್ಯ, ಜೇನು ವ್ಯವಸಾಯ, ಗಡ್ಡೆಗೆಣಸು ಕೃಷಿ ಇಂತಹ ಅನೇಕ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಯಿತು. ಕಾಲೇಜಿನ ಪ್ರಾಧ್ಯಾಪಕ, ಮಹಮ್ಮದ್ ವಾಯೆಜ್ , ಶ್ರೀಮತಿ ರತ್ನಮ್ಮ ಮತ್ತು ಇತರರು ಕಾರ್ಯಕ್ರಮ ದ ಸಂಯೋಜನೆ ಮಾಡಿದರು. ಪ್ರಾಧ್ಯಾಪಕ ರಾಘವೇಂದ್ರ ಕಾರ್ಯಕ್ರಮ ನಿರ್ವಹಣೆ ಮಾಡಿದರು.

Banner Ad