Banner Ad

ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಬೈರುಂಭೆ ಹೈಸ್ಕೂಲ್ ನಲ್ಲಿ 10 ನೇಯ ತರಗತಿಯಲ್ಲಿ ಶೇ 95 ರಷ್ಟು ಅಂಕ ಪಡೆದು ಸಾಧನೆಗೈದ ಉತ್ತರಕನ್ನಡದ ಕೊಡ್ಲಗದ್ಧೆಯ ನಿಧಿ ಮಂಜುನಾಥ ಭಟ್ ಕಡಾಸಿಗೆ ಇವಳಿಗೆ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧೀಶರಾದ ಶ್ರೀಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ರವರು ಮಂತ್ರಾಕ್ಷತೆ ಆಶೀರ್ವಾದ ನೀಡಿ ಕು. ನಿಧಿ ಇವಳಿಗೆ ಪ್ರತಿಭಾ ಪುರಸ್ಕಾರ ನೀಡಿದರು.

Banner Ad

ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಕುಳಿನಾಡು ಸೀಮಾ   ವಿಭಾಗದಲ್ಲಿ 10 ನೇಯ ತರಗತಿಯಲ್ಲಿ ಶೇ 95 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸೋಂದಾ ಶ್ರೀಗಳು ಪ್ರತಿಭಾ ಪುರಸ್ಕಾರ ನೀಡಿ ಆಶೀರ್ವಧಿಸಿದರು.
ಕು. ನಿಧಿ ಭಟ್ ಇವಳು ಕೊಡ್ಲಗದ್ಧೆಯ ಕಡಾಸಿಗೆಯ ಮಂಜುನಾಥ ಜನಾರ್ಧನ ಭಟ್ ಹಾಗೂ ಶ್ರೀಶೈಲಾ ಭಟ್ ದಂಪತಿಗಳ ಪುತ್ರಿಯಾಗಿದ್ದಾಳೆ.

Banner Ad