ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನ ನಂದಿಗದ್ದೆ ಯ ಬಯಲು ರಂಗ ಮಂದಿರದಲ್ಲಿ ನಾದ ವರ್ಷಿಣಿ ಸಂಸ್ಥೆಯ ಕಾರ್ಯಕ್ರಮ ಗಳು ಇದೇ ಬರುವ ದಿನಾಂಕ 20 ಮತ್ತು 21 ರಂದು ನಡೆಯಲಿವೆ.
ದಸರಾ ಹಬ್ಬದ ಆಚರಣೆಯನ್ನು ಧಾರ್ಮಿಕವಾಗಿ ಆಚರಿಸುವುದರ ಜೊತೆಗೆ ಸಾಂಸ್ಕೃತಿಕವಾಗಿಯೂ ಆಚರಿಸಿ ಎಲ್ಲರೂ ಒಂದೆಡೆ ಸೇರಿ ಹಬ್ಬದ ಸವಿಯನ್ನ ಸವಿಯಬೇಕು ಎಂಬ ಹಂಬಲದೊಂದಿಗೆ ನಂದಿಗದ್ದೆಯ ಮಾರುತಿಯ ಸನ್ನಿಧಾನದ ಬಯಲು ರಂಗಮಂದಿರದಲ್ಲಿ ಇದೇ ಬರುವ 20 ಮಂಗಳವಾರ (ದಶಮಿ) ಮತ್ತು 21 ಬುಧವಾರದ (ಏಕಾದಶಿ) ದಿನದಂದು 2 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ತಮಗೆಲ್ಲರಿಗೂ ಆತ್ಮೀಯವಾದ ಆಮಂತ್ರಣವನ್ನು ನೀಡುತ್ತಿದ್ದೇವೆ.ಎಂದು ನಾದ ವರ್ಷಿಣಿ ಸಂಸ್ಥೆಯ ಅಧ್ಯಕ್ಷರು ಸುಧಾಮ ದಾನಗೇರಿ ಕರೆ ನೀಡಿದ್ದಾರೆ.
ನಮ್ಮ ಆಮಂತ್ರಣವನ್ನು ಸ್ವೀಕರಿಸಿ, ಕಾರ್ಯಕ್ರಮಕ್ಕೆ ಆಗಮಿಸಿ,ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.ಎಂದುಹೇಳಿದ್ದು ಈ ಎರಡು ದಿನಗಳಲ್ಲಿ,ಸಂಗೀತ, ಮತ್ತು ವೀರಮಣಿ ಕಾಳಗ, ವಧು ಮಾಧವಿ, ತಾಳ ಮದ್ದಳೆ ಗಳು, ಯಲ್ಲಾಪುರದ ಋಷಿ ಕುಲಂ ಮುಖ್ಯಸ್ಥರಿಂದ ಸಂಸ್ಕಾರ ದೀಪ, ವಿಶೇಷ ಉಪನ್ಯಾಸ, ಗಳನ್ನು ಹಾಗೂ ಇನ್ನಿತರ ಕಾರ್ಯಕ್ರಮ ಗಳನ್ನು ನೋಡಿ ವಿಜಯ ದಶಮಿಯ ಮೆರಗನ್ನು ಹೆಚ್ಚಿಸ ಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ,
ತಮ್ಮೆಲ್ಲರ ಸಹಕಾರವಿದ್ದಲ್ಲಿ ಮಾತ್ರ ಈ ಕಾರ್ಯಕ್ರಮ ಯಶಸ್ವಿಗೊಳ್ಳಲುಸಾಧ್ಯ.ಹಾಗಾಗಿ ಸಂಘಟನೆಯ ಹಾದಿಯಲ್ಲಿ ಅಂಬೆಗಾಲಿಡುತ್ತಾ ಸಾಗುತ್ತಿರುವ ನಮ್ಮನ್ನ ಪೋಷಿಸಿ, ಕಲೆಯನ್ನೂ, ಕಲಾವಿದರನ್ನೂ , ನಮ್ಮ ಸಂಘಟನೆಯನ್ನೂ ಬೆಳೆಸಿ ಹರಸಿ, ಬೆಂಬಲಿಸಿ, ಆಶೀರ್ವದಿಸಿ ಎಂದು ಸುದಾಮ ದಾನಗೇರಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು. ನಾದವರ್ಷಿಣಿ ಟ್ರಸ್ಟ್ ಮರಡಾ ಗುಂದ. ಹಾಗೂ ವಿದ್ಯಾರ್ಥಿ ಮತ್ತು ಪಾಲಕವೃಂದ ದವರು ಕರೆನೀಡಿದ್ದಾರೆ.
