ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಅವುರ್ಲಿಯ ಗ್ರಾಮಸ್ಥರು ಬಿ ಎಸ್ ಎನ್ ಎಲ್ ಟವರ್ ನಿರ್ಮಿಸುವಂತೆ ಮನವಿ ಮಾಡಿರುತ್ತಾರೆ.
ಅವುರ್ಲಿಯ ಗ್ರಾಮದಲ್ಲಿ ಶಾಶ್ವತ ಬಿ ಎಸ್ ಎನ್ ಎಲ್ ಮೊಬೈಲ್ ಟವರ್ ಸಂಪರ್ಕ ಇಲ್ಲದ ಕಾರಣ ಗ್ರಾಹಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ವಿಶೇಷವಾಗಿ ಮಳೆಗಾಲದ ಸಮಯದಲ್ಲಿ ಹೆಚ್ಚಿನ ತೊಂದರೆಯನ್ನು ಅನುಭವಿಸುವ ಪರಿಸ್ಥಿತಿ ಇದೆ. ಅವುರ್ಲಿ ಗ್ರಾಮಕ್ಕೆ ಬಿ ಎಸ್ ಎನ್ ಎಲ್ ಟವರ್ ಮೊಬೈಲ್ ಸಂಪರ್ಕ ಇಲ್ಲದ ಕಾರಣ ದೈನಂದಿನ ಡಿಜಿಟಲ್ ವ್ಯವಹಾರ,ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕಲಿಕಾ ಚಟುವಟಿಕೆ,ಗ್ಯಾಸ್ ಬುಕ್,ಒಟಿಪಿ ಡೆಲಿವರಿ,ಶಿಕ್ಷಣಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳಿಗೆ ಇಂದಿನ ಡಿಜಿಟಲ್ ತಂತ್ರಜ್ಞಾನ ಯುಗದಲ್ಲಿ ನೂರಾರು ಗ್ರಾಹಕರಿಗೆ ಹಾಗೂ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಸಿಂಥೇರಿ ರಾಕ್ಸ ಅವುರ್ಲಿಯ ಗ್ರಾಮದ ವ್ಯಾಪ್ತಿಗೆ ಒಳಪಡುವುದರಿಂದ ಪ್ರವಾಸಿಗರ ಅನುಕೂಲತೆ ದೃಷ್ಟಿಯಿಂದ ಬಿ ಎಸ್ ಎನ್ ಎಲ್ ಮೊಬೈಲ್ ಟವರಿನ ಅವಶ್ಯಕತೆ ಇರುವುದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿ ವರ್ಗದವರಲ್ಲಿ, ಉತ್ತರಕನ್ನಡ ಜಿಲ್ಲೆಯ ಮಾನ್ಯ ಸಂಸದರಲ್ಲಿ ಅವುರ್ಲಿಯ ಗ್ರಾಮಸ್ಥರು ಮಾಧ್ಯಮದ ಮೂಲಕ ಮನವಿ ಮಾಡಿರುತ್ತಾರೆ.
