ಸುದ್ದಿ ಕನ್ನಡ ವಾರ್ತೆ
ಜೋಯಿಡಾ ದ ಪ್ರೇರಣಾ ಸಂಸ್ಥೆಯ ಅಧ್ಯಕ್ಷೆ ಸುಕನ್ಯಾ ದೇಸಾಯಿ ಅವರು ಹಲವಾರು ವರ್ಷ ಗಳಿಂದ ತಮ್ಮ ಸಂಸ್ಥೆಯ ಮೂಲಕ ಊರಿನಲ್ಲಿ, ತಾಲೂಕಿನಲ್ಲಿ, ಜಿಲ್ಲೆಯ ವಿವಿಧ ಬಾಗಗಳಲ್ಲಿ ಹಲವಾರು ಕಾರ್ಯಕ್ರಮ ಗಳನ್ನು ನೀಡಿದವರು ಒಂದು ಕಾರ್ಯಕ್ರಮದ ಸಂಘಟನೆ,ಎಷ್ಟು ಕಷ್ಟ ಮತ್ತು ಹಣಕಾಸಿನ ಸ್ಥಿತಿ ಗತಿ, ಕಲಾವಿದರನ್ನು ಸಂಪರ್ಕಿಸಿ ಕಾರ್ಯಕ್ರಮ ನಡೆಸುವುದು ಜೊತೆಗೆ ಊಟ ಉಪಚಾರ,ಇದರ ಅರಿವು ಇದ್ದವರು, ಅವರಿಗೆ ನಂದಿಗದ್ದೆಯಲ್ಲಿ ನಡೆದ ಸಾರ್ವಜನಿಕ ಶ್ರೀ ಗಜಾನನೋತ್ಸವ ಸಮೀತಿ ಯವರು ನಡೆಸಿದ ಧಾರ್ಮಿಕ, ಸಾಂಸ್ಕೃತಿಕ, ಇನ್ನಿತರ ಕಾರ್ಯಕ್ರಮ ಗಳನ್ನು ಎರಡು ಮೂರು ದಿನಗಳ ಕಾಲ ಸಾರ್ವಜನಿಕ ವಾಗಿ ನಡೆಸಿರುವುದನ್ನು ನೋಡಿ, ಕಾರ್ಯಕ್ರಮ ದ ಬಗ್ಗೆ ತಮ್ಮ ಅಭಿಪ್ರಾಯ ವನ್ನು ವ್ಯಕ್ತ ಪಡಿಸುವ ಮೂಲಕ ಸಂತಸ ವನ್ನು ಹಂಚಿಕೊಂಡಿದ್ದಾರೆ.
“ಹಳೇಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು”ಅಂದಂತೆ ಹಿರಿಯರ ಅನುಭವಿಗಳ ಮಾರ್ಗದರ್ಶನ ಪಡೆದು ಯುವ ಮುಂದಾಳುಗಳ ಸಾರತ್ಯದಲ್ಲಿ ತುಂಬಾ ಅದ್ದೂರಿಯಾಗಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಯಿತು ಅನ್ನೋದು ನನ್ನ ಅಭಿಪ್ರಾಯ ಮತ್ತು ಪ್ರತ್ಯಕ್ಷ ಪರೋಕ್ಷವಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು, ಮಹಿಳೆಯರು ಮಕ್ಕಳು ಪುರುಷರು ಎಲ್ಲರೂ ತಮ್ಮದೇ ಮನೆಯ ಕಾರ್ಯಕ್ರಮ ಎಂಬಂತೆ ಮುತುವರ್ಜಿಯಿಂದ ವಹಿಸಿದ ಶ್ರಮ, ಆಸಕ್ತಿ, ಉತ್ತಮ ಮನೋಭಾವನೆ, ಒಗ್ಗಟ್ಟು, ಕಾರ್ಯಕ್ರಮ ಯಶಸ್ವಿಯಾಗುವ ಮೂಲಕ ಉತ್ತಮ ಫಲ ನೀಡಿದೆ ಅನ್ನೋದು ಎಲ್ಲರೂ ತಿಳಿದ ವಿಷಯ, ಸಂಘಟಕರು ಬಂದವರನ್ನ ಪ್ರೀತಿಯಿಂದ ಮಾತಾಡಿಸುವುದು, ಊಟ ಉಪಚಾರದ ವ್ಯವಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮಗಳ ರೂಪರೇಷೆ, ಸನ್ಮಾನ, ಎಲ್ಲವೂ ಉತ್ತಮವಾಗಿದ್ದು ಉತ್ತಮವಾದ ಸಂಘಟನೆ ಎಂಬುದನ್ನ ಸಾಬೀತು ಮಾಡಿದೆ,ಹಬ್ಬಗಳ ಆಚರಣೆಯ ಉದ್ದೇಶವೇ ಒಂದುಗೂಡಿಸುವಿಕೆ,ಧರ್ಮಗಳ ಬೇದವಿಲ್ಲದೆ ನಡೆದ ಊರಿನ ಕಲಾವಿದರ ನಾಟಕ ತುಂಬಾ ಮನರಂಜನೆ ನೀಡಿದ್ದು ಸತ್ಯವಾದರೆ, ಮಾತ್ರಮಂಡಳಿಯವರ ಹೊಸ ಪ್ರಯತ್ನವಾದ ರೂಪಕ ಉತ್ತಮವಾದ ಸಂದೇಶ ನೀಡಿತ್ತು, ಕೀರ್ತನೆಗಳು, ಯಕ್ಷಗಾನ, ಭರತನಾಟ್ಯ,ಊರಿನ ಕಲಾವಿದರಿಂದ ನಡೆದ ಸಂಗೀತ ಸೇವೆ,ಮಂಗಲಾ ಹೆಗಡೆಯವರ ನಿರ್ದೇಶನದಲ್ಲಿ ಆ ಭಾಗದ ಮಹಿಳೆಯರು ನಡೆಸಿಕೊಟ್ಟ ತಾಳಮದ್ದಳೆ ಸೊಗಸಾಗಿ ಮೂಡಿಬಂತು, ದಿನವೂ ನಡೆದ ರುಚಿಕಟ್ಟಾದ ಅನ್ನ ಸಂತರ್ಪಣೆ, ಧಾರ್ಮಿಕ ಹೋಮಹವನಗಳು, ಎಲ್ಲವೂ ಕೂಡ ಉತ್ತವಾಗಿದ್ದವು,ಯಾವುದೇ ಕ್ಲೇಶಗಳಿಲ್ಲದ ಉತ್ತಮವಾದ ಕಾರ್ಯಕ್ರಮ ಎಂದೆಂದೂ ಸ್ವಾಗತಾರ್ಹ,ಒಂದು ಕಾರ್ಯಕ್ರಮ ಉತ್ತಮವಾಗಿ ನಡೆದಿದೆ ಎಂದರೆ ಅದರ ಹಿಂದೆ ಅನೇಕರ ಶ್ರಮವಿರುತ್ತದೆ, ಉತ್ತಮವಾದದ್ದನ್ನು,ಮೆಚ್ಚುಗೆಯಾಗಿದ್ದನ್ನ ವ್ಯಕ್ತಪಡಿಸಬೇಕೆನ್ನುವ ಉದ್ದೇಶದಿಂದ ನಾನು ಅರಿತಿರುವುದನ್ನ ನಿಮ್ಮೊಂದಿಗೆ ಇಲ್ಲಿ ಹಂಚಿಕೊಂಡಿದ್ದೇನೆ. ಎನ್ನುವ ಮಾತನ್ನು ಹೇಳಿರುತ್ತಾರೆ.
