ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಪರ್ವರಿ-ಮಾಪ್ಸಾ ಮೇಲ್ಸೇತುವೆಯಲ್ಲಿ ದ್ವಿಚಕ್ರ ವಾಹನಗಳ ನಿರ್ಬಂಧದ ಕುರಿತು  IIM  ನಾಗ್ಪುರದ ಶಿಫಾರಸ್ಸುಗಳ ಪ್ರಕಾರ ನಿರ್ಧಾರ ತೆಗೆದುಕೊಳ್ಳಲಾಗುವುದು. IIM ತಜ್ಞರು ಈ ಮೇಲ್ಸೇತುವೆಯನ್ನು ಪರಿಶೀಲಿಸಿ ಸಲಹೆ ನೀಡಲಿದ್ದಾರೆ ಮತ್ತು ನಂತರವೇ ನಿರ್ಬಂಧಗಳ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಮೇಲ್ಸೇತುವೆ ಉಧ್ಘಾಟನೆಯ ಮರುದಿನವೇ ಇಲ್ಲಿ ಭೀಕರ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದರು. ಈ ಘಟನೆಯ ನಂತರ ಸೇತುವೆಯ ಮೇಲೆ ದ್ವಿಚಕ್ರವಾಹನ ಗಳಿಗೆ ನಿರ್ಬಂಧ ಹೇರಲಾಯಿತು. ದ್ವಿಚಕ್ರ ವಾಹನ ನಿರ್ಬಂಧಕ್ಕೆ ಬ್ಯಾರಿಕೇಡ್ ಹಾಕಲಾಗಿದೆ. ಇದರಿಂದಾಗಿ ಪರ್ವರಿಯಲ್ಲಿ ಸೇತುವೆಯ ಕೆಳ ಭಾಗದ ರಸ್ತೆಯಲ್ಲಿ ವಾಹನ ದಟ್ಟಣೆ ಆರಂಭಗೊಂಡಿದೆ.

ಪರ್ವರಿ ಮೇಲ್ಸೇತುವೆಯಲ್ಲಿ  (Porvorim Flyover) 65 ಕಿಮಿ ವೇಗದ ಮಿತಿಯನ್ನು ನಿಗಧಿಪಡಿಸಲಾಗಿದೆ. ಆದರೆ ಹೆಚ್ಚಿನ ವಾಹನ ಚಾಲಕರು ಈ ವೇಗದ ಮಿತಿಯನ್ನು ಪಾಲಿಸಿಲ್ಲ. ಅಪಘಾತಕ್ಕೀಡಾದ ಕಾರು 100 ಕಿಮಿ ಗಿಂತ ಹೆಚ್ಚು ವೇಗದಲ್ಲಿ ಚಲಿಸುತ್ತಿತ್ತು, ಇದರಿಂದಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ವೇಗದ ಮಿತಿಯನ್ನು ಜಾರಿಗೊಳಿಸಲು ವಿಶೇಷ ವ್ಯವಸ್ಥೆ ಅಥವಾ ಕಾರ್ಯವಿಧಾನ ಸ್ಥಾಪಿಸಬೇಕಿದೆ. ಪ್ಲೈ ಓವರ್ ಮೇಲೆ ರಂಬ್ಲರ್ ಅಳವಡಿಸುವುದು ತಾಂತ್ರಿಕವಾಗಿ ಕಷ್ಟ ಎಂದು ಲೊಕೋಪಯೋಗಿ ಇಲಾಖೆ ಸ್ಪಷ್ಟಪಡಿಸಿದೆ. ತಜ್ಞರ ಸಂಸ್ಥೆಯ ಮೂಲಕ ಈ ಸೇತುವೆಯ ಅಧ್ಯಯನ ನಡೆಸಿ ಮುಂಸದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿಗಳ ಮುಖ್ಯ ಎಂಜಿನೀಯರ್ ದತ್ತಪ್ರಸಾದ ಕಾಮತ್ ಮಾಹಿತಿ ನೀಡಿದ್ದಾರೆ.

ಫ್ಲೈಓವರ್ ಪರಿಶೀಲನೆ ನಂತರ ಅವರು ವಿವಿಧ ಶಿಫಾರಸ್ಸುಗಳನ್ನು ಸಲ್ಲಿಸಲಿದ್ದಾರೆ. ಅದರ ಆಧಾರದ ಮೇಲೆ ದ್ವಿಚಕ್ರವಾಹನಗಳನ್ನು ಅನುಮತಿಸಬೇಕೆ ಅಥವಾ ಬೇಡವೇ ಎಂಬ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಮಳೆಯಿಂದಾಗಿ ಸೇತುವೆಯ ಮೇಲೆ ಅಲ್ಲಲ್ಲಿ ಸಂಗ್ರಹವಾದ ನೀರನ್ನು ಹೊರಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದು ದತ್ತಪ್ರಸಾದ ಕಾಮತ್ ಮಾಹಿತಿ ನೀಡಿದರು.