ಸುದ್ದಿ ಕನ್ನಡ ವಾರ್ತೆ

ಪ್ರಕೃತಿ ನಿಯಮವೇ ಹಾಗೆ ಪ್ರಕೃತಿ ಮನುಷ್ಯನು ಬದುಕಲು ಕಾರಣವಾಗಿದೆ. ಪ್ರಕೃತಿಯಲ್ಲಿ ಏನೇ ಬದಲಾವಣೆ ಆದರೂ ಅದು ಕಾಲ ಕಾಲಕ್ಕೆ ಬದಲಾವಣೆಯ ಸ್ವರೂಪವನ್ನು ಜಗತ್ತಿಗೆ ತೋರಿಸುತ್ತದೆ. ಜನ ಜೀವನವೂ ಕೂಡ ಪ್ರಕೃತಿ ನಿಯಮದಂತೆ ನಡೆಯುತ್ತದೆ. ಏನೇ ಬದಲಾವಣೆ ತಂದರೂ ಪ್ರಕೃತಿ ನಿಯಮಗಳು ಬದಲಾಗೋದಿಲ್ಲ ಎನ್ನುವದು ಇಲ್ಲಿದೆ ನೋಡಿ ಪ್ರಕೃತಿಯಲ್ಲಿ ಹುಟ್ಟಿ ಬೆಳೆಯುವ ಗಿಡ ಮರಗಳು ಕೊನೆಯ ಕ್ಷಣದ ವರೆಗೆ ತಮ್ಮ ಹುಟ್ಟು ಗುಣಗಳನ್ನು ಬಿಡದೆ ಪಾಲಿಸುತ್ತವೆ. ಇದಕ್ಕೆ ಉದಾಹರಣೆ ಎಂದರೆ ಈ ಚಿತ್ರದಲ್ಲಿರೋ ಪಪ್ಪಾಯಿ ಗಿಡ. ಇದು ಬೆಳೆದು ದೊಡ್ಡದಾಗಿ ಕಾಯಿ ಬಿಡಲು ಆರಂಭವಾಗಿತ್ತು. ಆದರೆ ಮಂಗಗಳ ಕಾಟದಿಂದ ಈ ಗಿಡವು ಮುರಿದು ಬಿದ್ದಿತು. ಅರ್ಧದಲ್ಲೇ ಮುರಿದ ಗಿಡವನ್ನು ಕಿತ್ತು ಹಾಕಬಹುದಿತ್ತು. ಆದರೆ ಕೃಷಿಕರು ಎಂದು ಬದುಕನ್ನು ಹಾಳು ಮಾಡುವವರಲ್ಲ. ನೋಡೋಣ ಎಂದು ಹಾಗೆ ಬಿಟ್ಟರು. ಕೆಲವು ತಿಂಗಳಲ್ಲಿ ಈ ಪಪ್ಪಾಯಿ ಗಿಡ ನಿಧಾನವಾಗಿ ಚಿಗುರ ತೊಡಗಿತು. ಮನೆಯವರೆಗೂ ಖುಷಿಯಾಯಿತು. ಒಂದು ವರ್ಷದಲ್ಲಿ ಹಲವು ಟಿಸಿಲ್ ಗಳನ್ನು ಒಡೆದು ಈ ಪಪ್ಪಾಯಿ ಗಿಡ ಮೈ ತುಂಬ ಕಾಯಿ ಬಿಟ್ಟಿದೆ. ಮನೆ ಅಂಗಳದಿಂದಲೆ ಸಿಗುವ ಈ ತರಕಾರಿ ಮನೆ ಜನರಿಗೂ ಸಂತಸ ತಂದಿದೆ ಮನೆಯ ಪುಟ್ಟ ಕಂದ ವಿರಾಜ್. ಕೂಡ ಪಪ್ಪಾಯಿ ಹಣ್ಣಾಗುವುದನ್ನೇ ಕಾಯುತ್ತಿದ್ದಾನೆ. ಬಾಳೆ ಗಿಡ ಕಡಿದರೂ ಕೊನೆಗೆ ಚಿಗುರಿ, ಮತ್ತೆ ಬಾಳೆಗೊನೆ ನೀಡುವುದು ಪ್ರಕೃತಿಯ ನಿಯಮ. ಅದರಂತೆ ಈ ಪಪ್ಪಾಯಿ ಗಿಡ ಕೂಡ , ಮುರಿದು ಹೋದರೂ ತನ್ನ ಯಜಮಾನ ತನ್ನ ರಕ್ಷಿಸಿದ್ದಕ್ಕೆ ಉಡುಗೊರೆ ನೀಡಿದೆ. ಇದು ನಂದಿಗದ್ದಾಗ್ರಾಮ ಪಂಚಾಯತದ ಶೇವಾಳಿ ಗ್ರಾಮದ ಪದ್ಮನಾಭ ದೇಸಾಯಿ ಅವರ ಮನೆ ಅಂಗಳಕ್ಕೆ ಹೊಂದಿ ಕೊಂಡಿರುವ ಪಪ್ಪಾಯಿ ಗಿಡವಾಗಿದ್ದು ನೋಡುಗರ ಮನಸೆಳೆಯುತ್ತಿದೆ.