Banner Ad

ಸುದ್ದಿ ಕನ್ನಡ ವಾರ್ತೆ

ಜೊಯಡಾದ ಕಾಳಿ ಬ್ರಿಗೇಡ್ ಸಂಘಟನೆ ಯವರು ಇಂದು ಕಾರವಾರದಲ್ಲಿ ಮಾನ್ಯ ಜಿಲ್ಲಾಧಿಕಾರಿ ಅವರನ್ನು, ಮತ್ತು ವಿವಿಧ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ತಾಲೂಕಿನ ಸಮಸ್ಯೆಗಳನ್ನು ಪರಿಹರಿಸಲು ವಿನಂತಿ ಮಾಡಿದರು ತಾಲೂಕಿನಲ್ಲಿ ಆಧಾರ ನೊಂದಣಿ ,ತಿದ್ದುಪಡಿ ವಿಷಯಕ್ಕೆ ಜನರು ತುಂಬ ತೊಂದರೆ ಯನ್ನು ಎದುರಿಸುತ್ತಿದ್ದಾರೆ.

Banner Ad

ಹಳ್ಳಿಯಿಂದ ಬಂದ ರೈತರು, ವಿದ್ಯಾರ್ಥಿಗಳು ಅಧಾರ ಕಾರ್ಡ್ ನೊಂದಣಿ ಅಥವ ತಿದ್ದುಪಡಿ ಆಗದೆ ತಮ್ಮ ಎಲ್ಲ ಕೆಲಸಗಳಲ್ಲಿ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಆಧಾರ ಕೆಂದ್ರ ಇಲ್ಲದೆ ಆಗುವ ತೊಂದರೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಆದಷ್ಟು ಬೇಗ ಆಧಾರ ಕೇಂದ್ರ ಪ್ರಾರಂಬಿಸುವಂತೆ ವಿನಂತಿ ಮಾಡಲಾಯಿತು. ತಾಲೂಕಿನ ಎಲ್ಲಾ ಹಳೆ ಸೇತುವೆಗಳ ಸಮೀಕ್ಷೆ ಮಾಡಿ ಅಪಾಯದ ಅಂಚಿನಲ್ಲಿರುವ ಸೇತುವೆಗಳನ್ನು ದುರಸ್ತಿ ಮಾಡಲು ಲೋಕೋಪಯೋಗಿ ಇಲಾಖೆಗೆ ನಿರ್ದೇಶನ ನೀಡುವಂತೆ ವಿನಂತಿ ಮಾಡಲಾಯಿತು.

ಅದೇ ರೀತಿ ಭೂಮಾಪನ ಇಲಾಖೆಯಲ್ಲಿ ಎಡಿಎಲ್ ಆರ್ ಸ್ಥಾನ ಖಾಲಿ ಇದ್ದು , ಹಳಿಯಾಳದ ಅಧಿಕಾರಿಗೆ ಚಾರ್ಜ್ ಇದೆ,ಆದರೆ ಅವರು ಜೋಯಡಾಕ್ಕೆ ಸರಿಯಾಗಿ ಬಾರದೇ ಜನರಿಗೆ ತೊಂದರೆಯಾಗಿದೆ. ಜಮೀನು ಸರ್ವೇ, ವಿಭಾಗಣೆ, ನಕಾಶೆ, ಇನ್ನಿತರ ಕೆಲಸ ಮಾಡಲು ತಿಂಗಳುಗಟ್ಟಲೆ ಕಾಯುವಂತಾಗಿದೆ. ಅದ್ದರಿಂದ ಜೋಯಡಾಕ್ಕೆ ಖಾಯಂವಾಗಿ ಸಹಾಯಕ ನಿರ್ದೇಶಕರನ್ನು ನೇಮಿಸಬೇಕೆಂದು ವಿನಂತಿ ಮಾಡಲಾಯಿತು.

ಮಾನ್ಯ ಜಿಲ್ಲಾಧಿಕಾರಿ ಲಕ್ಷ್ಮಿಪ್ರೀಯಾ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಷಣ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕಾಳಿ ಬ್ರಿಗೇಡ್ ಮುಖ್ಯ ಸಂಚಾಲಕ ಸುನೀಲ್ ದೇಸಾಯಿ, ಮುಖ್ಯ ಸಮಿತಿ ಅಧ್ಯಕ್ಷ ಸತೀಶ್ ನಾಯ್ಕ್, ಉಮೇಶ್ ವೇಳಿಪ್, ಪ್ರಭಾಕರ್ ನಾಯ್ಕ್, ದಿನೇಶ್ ದೇಸಾಯಿ ಮತ್ತು ಇತರ ಸದಸ್ಯರು ಹಾಜರಿದ್ದರು.

Banner Ad