Banner Ad

ಸುದ್ದಿ ಕನ್ನಡ ವಾರ್ತೆ

ಇಂದು ರಕ್ಷಾ ಬಂಧನ ದಿನ, ನೇರವಾಗಿ ಹೇಳಬೇಕಾದರೆ, ಅಣ್ಣ ತನ್ನ ತಂಗಿಯ, ಅಕ್ಕ ನ ರಕ್ಷಣೆ ಮಾಡಬೇಕು, ಅದೇ ಈ ಹಬ್ಬದ ಒಂದು ಮಾತಿನ ವಿವರಣೆ, ಅದಕ್ಕಾಗಿ ಅಕ್ಕ ತಂಗಿಯರು ತಮ್ಮ ಅಣ್ಣ ತಮ್ಮಂದಿರಿಗೆ ರಕ್ಷಾ ಬಂಧನ ವನ್ನು ಕಟ್ಟಿ ರಕ್ಷಣೆ ಕೇಳುವ ದಿವಸ ಈ ರಕ್ಷಾ ಬಂಧನ ದಿನವಾಗಿದೆ.

Banner Ad

ಭಾರತ ದಲ್ಲಿ ಇದು ವಿಶೇಷ ಹಬ್ಬ ಮತ್ತು ಅನೇಕ ವಿವರಣೆ ಗಳೂ ಧಾರ್ಮಿಕ ಆಚರಣೆಗಳು ಕೂಡ ಹುಣ್ಣಿಮೆ ದಿನ ನಡೆಯುವ ಈ ಹಬ್ಬಕ್ಕೆ ಇದೆ, ಕೇವಲ ಹಿಂದೂ ಗಳು ಅಷ್ಟೇ ಅಲ್ಲ ಇತರರು ಕೂಡ ತಮ್ಮ ಭವಿಷ್ಯ ಕ್ಕಾಗಿ ಈ ಹಬ್ಬದ ಆಚರಣೆ ಯಲ್ಲಿ ಭಾಗಿಯಾಗಿ ತಮ್ಮ ರಕ್ಷಣೆಗೆ ದೇವರನ್ನು ಸ್ಮರಿಸಿ ಸಮಾಜದ ಗುರುತರ ಜವಾಬ್ದಾರಿಯ ಅಣ್ಣ ತಮ್ಮಂದಿರಿಗೆ ರಕ್ಷಾ ಬಂಧನವನ್ನು ಕಟ್ಟಿ ಹಬ್ಬದ ಗೌರವ ಹೆಚ್ಚಿಸುತ್ತಾರೆ ಮತ್ತು ತಾವು ಕೂಡ ಎಲ್ಲ ಹಬ್ಬ ಹುಣ್ಣಿಮೆ ಗಳಲ್ಲಿ ಭಾಗವಹಿಸುವ ಮೂಲಕ ಸಮಾಜಕ್ಕೆ ಮಾದರಿ ಆಗುತ್ತಾರೆ, ಇದಕ್ಕೆ ಉಧಾಹರಣೆ ಯಾಗಿ ಮುಂಡಗೋಡ ತಾಲೂಕಿನ ಮುಸ್ಲಿಂ ಸಮಾಜದ ಸಾಲಗಾಂ ಗ್ರಾಮದ ಸಾಹಿರಾಬಾನು ಅವರೇ ಆಗಿದ್ದಾರೆ.

ಇವರ ಮನೆಯಲ್ಲಿ ಜೆಡಿಎಸ್ ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ ಎಸ್ ಸಂಗೂರ ಮಠ ಅವರು ಬಂದು ತಂಗಿಯ ಸಮನಳಾದ ಸಾಯರಾ ಬಾನುಅವರಿಂದ ರಕ್ಷೆಯನ್ನು( ರಕ್ಷಾ ಬಂಧನ) ಕಟ್ಟಿಸಿಕೊಂಡು ಅಣ್ಣನ ಜವಾಬ್ದಾರಿಯನ್ನು ನಿಭಾಯಿಸುವ ಭರವಸೆ ನೀಡುವ ಮೂಲಕ ಉತ್ತಮ ದಾರಿ ತೋರಿಸಿದ್ದಾರೆ. ಇದು ಇಂದಿನ ಕಾಲದಲ್ಲಿ ಎಲ್ಲ ಧರ್ಮದವರೂ ಕೂಡಿ ನಡೆದು ಸಮಾಜದ ಶಾಂತಿಗೆ ಕಾರಣ ರಾಗಬೇಕು ಎಂಬ ಸಂದೇಶ ವನ್ನು ಸಾರಿದೆ.

Banner Ad