Banner Ad

ಸುದ್ದಿ ಕನ್ನಡ ವಾರ್ತೆ
ಪಣಜಿ: ಗೋವಾದ ಕ್ಯಾಸಿನ ಪ್ರೈಡ್, ಮೆಜೆಸ್ಟಿಕ್ ನ ನಿರ್ದೇಶಕರಾದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಶ್ರೀನಿವಾಸ್ ನಾಯಕ್ ರವರ ಮೇಲೆ ಶುಕ್ರವಾರ ರಾತ್ರಿ ಬಾರಿ ಗುಂಡಿನ ದಾಳಿ ನಡೆದಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಶ್ರೀನಿವಾಸ್ ನಾಯಕ್ ಪಾರಾಗಿದ್ದಾರೆ.

Banner Ad

ಈ ಘಟನೆ ಗೋವಾದ ರಾಜಧಾನಿ ಪಣಜಿ ಸಮೀಪದ ಪರ್ವಲಿಯಲ್ಲಿರುವ ಮೆಜೆಸ್ಟಿಕ್ ಹೋಟೆಲ್ ಎದುರು ಶುಕ್ರವಾರ ರಾತ್ರಿ ಸಂಭವಿಸಿದೆ. ಶ್ರೀನಿವಾಸ್ ನಾಯ್ಕ್ ರವರಿಗಾಗಿ ಕಾದು ಕುಳಿತಿದ್ದ ಇಬ್ಬರು ದಾಳಿ ಕೋರರು ನಾಯಕ್ ರವರು ಹೋಟೆಲ್ ನಿಂದ ಹೊರಬರುತ್ತಿದ್ದಂತೆಯೇ ಭೀಕರವಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್ ಶ್ರೀನಿವಾಸ್ ನಾಯಕ್ ರವರಿಗೆ ಹಾಗೂ ಅವರ ಭದ್ರತಾ ಸಿಬ್ಬಂದಿಗಳಿಗೂ ಗುಂಡು ತಗುಲಿಲ್ಲ. ಈ ಭೀಕರ ದೃಶ್ಯ ಅಲ್ಲಿಯೇ ಇರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸರಿಯಾಗಿದೆ.

 

ಪೊಲೀಸರು ದಾಳಿ ಕೋರರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

Banner Ad