ಸುದ್ದಿ ಕನ್ನಡ ವಾರ್ತೆ
ಜೋಯಿಡಾ ದಲ್ಲಿ  ಡಾ. ಮಹಾಂತ ಶಿವಯೋಗಿ ಗಳವರ ಜನ್ಮ  ದಿನವನ್ನು ವ್ಯಸನ ಮುಕ್ತ ದಿನವನ್ನಾಗಿ ಆಚರಿಸಲಾಯಿತು.

ತಾಲೂಕಾ ದಂಡಾಧಿಕಾರಿಗಳು ಮತ್ತು ತಾಲೂಕಾ ಕಾರ್ಯ ನಿರ್ವಹಣಾಧಿಕಾರಿಗಳು ಗಣ್ಯರು ಡಾ. ಮಹಾಂತ ಶಿವಯೋಗಿ ಗಳವರ ಭಾವಚಿತ್ರಕ್ಕೆ ಮಾಲಾರ್ಪಣೆ , ಪುಷ್ಪಾರ್ಚನೆ ಮತ್ತು ಮಂಗಳಾರತಿ ಬೆಳಗುವುದರೊಂದಿಗೆ ಚಾಲನೆ ನೀಡಿದರು. ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮ ನಡೆಯಲು ಸಹಕರಿಸಿದರು.

ವಿಶೇಷ ಉಪನ್ಯಾಸಕರಾಗಿ ಡಾ. ಸಾಜಿದ್ (ಜೊಯಿಡಾ ಆಸ್ಪತ್ರೆ ) ಅವರು ಉಪನ್ಯಾಸ ನೀಡುತ್ತಾ – ವ್ಯಸನ ದಿಂದ ಮುಕ್ತವಾಗಲು ವಿವಿಧ ಚಿಕಿತ್ಸೆ ಇರುವ ಬಗ್ಗೆ ತಿಳಿಸಿದರು.
ವಿದ್ಯಾರ್ಥಿಗಳು ಆರಂಭದಿಂದಲೇ ವ್ಯಸನದಿಂದ ದೂರವಿದ್ದರೆ ಸುಸ್ತಿರ ಸಮಾಜ ನಿರ್ಮಾಣ ಸಾಧ್ಯ ಎನ್ನುವುದನ್ನು ವಿವರವಾಗಿ ತಿಳಿಸಿದರು.
ಲೋಕೋಪಯೋಗಿ ಇಲಾಖೆ ಕೃಷಿ ಇಲಾಖೆ, ಮಕ್ಕಳ ಕಲ್ಯಾಣ ಇಲಾಖೆ , ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳು ಸಿಬ್ಬಂದಿಗಳು ಭಾಗವಹಿಸಿದ್ದರು.

ತಾಲೂಕಾ ದಂಡಾಧಿಕಾರಿ ಮಂಜುನಾಥ ಮನ್ನೊಳ್ಳಿ , ಈ. ಒ ಎನ್ ಭಾರತಿ ಕಾರ್ಯಕ್ರಮ ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡರು.