ಸುದ್ಧಿಕನ್ನಡ ವಾರ್ತೆ

ತೆಂಗು ಬೆಳೆಗಾರರಿಗೆ ಸಿಹಿ ಸುದ್ಧಿ…ಈಗ ತೆಂಗಿನ ಕಾಯಿಗೆ ಮಾತ್ರವಲ್ಲದೆಯೇ ತೆಂಗಿನ ಚಿಪ್ಪಿಗೂ ಕೂಡ ಉತ್ತಮ ಬೆಲೆ ಬಂದಿದೆ. ಕೃಷಿ ತ್ಯಾಜ್ಯವೆಂದು ಪರಿಗಣಿಸಲಾಗುತ್ತಿದ್ದ ತೆಂಗಿನ ಚಿಪ್ಪಿಗೆ ಇದೀಗ ಬಂಪರ್ ಬೆಲೆ ಬಂದಿದೆ.

 

ಇದೀಗ ಇದ್ದಕ್ಕಿದ್ದಂತೆಯೇ ದೇಶ-ವಿದೇಶಗಳಲ್ಲಿ ತೆಂಗಿನ ಕಾಯಿ ಚಿಪ್ಪಿಗೆ ಬೇಡಿಕೆ ಹೆಚ್ಚಾಗಿದೆ…. ಇದಕ್ಕೆ ಕಾರಣವೇನು ಎಂದು ತಿಳಿದುಕೊಳ್ಳಲು ಸಂಪೂರ್ಣ ಸುದ್ಧಿ ಓದಿ…

ಸೌದೆಯ ಬದಲು ಉರುವಲಾಗಿ ಬಳಕೆ ಮಾಡುತ್ತಿದ್ದ ತೆಂಗಿನ ಕಾಯಿ ಚಿಪ್ಪಿಗೆ ಇದೀಗ ದೇಶ-ವಿದೇಶಗಳಲ್ಲಿ ಬೇಡಿಕೆ ಬಂದಿದೆ. ( Now there is a demand for coconut shells in the country and abroad)  ಈ ಹಿಂದೆ ಉಚಿತವಾಗಿಯೇ ಸಿಗುತ್ತಿದ್ದ ತೆಂಗಿನ ಚಿಪ್ಪು ಇದೀಗ ತೆಂಗು ಬೆಳೆಗಾರರಿಗೆ ಹಾಗೂ ಸಣ್ಣ ವ್ಯಾಪಾರಿಗಳಿಗೆ ಆದಾಯದ ಮೂಲವಾಗಿದೆ.
ಸದ್ಯ ಮಾರುಕಟ್ಟೆಯಲ್ಲಿ ಒಂದು ತೆಂಗಿನ ಕಾಯಿಯ ಎರಡು ಚಿಪ್ಪಿಗೆ 3.50 ರೂಗಳ ವರೆಗೂ ಖರೀದಿ ಮಾಡಲಾಗುತ್ತಿದೆ ಎನ್ನಲಾಗಿದೆ. ಇದು ತೆಂಗು ಬೆಳೆಗಾರರಿಗೆ ಹೆಚ್ಚುವರಿ ಲಾಭ ತಂದುಕೊಡುತ್ತಿದೆ.

ಆಧುನಿಕ ತಂತ್ರಜ್ಞಾನ ಹಾಗೂ ವಿವಿಧ ವೈಜ್ಞಾನಿಕ ಕಾರಣಗಳಿಂದಾಗಿ ತೆಂಗಿನ ಚಿಪ್ಪಿಗೆ ಭಾರಿ ಬೇಡಿಕೆ ಬಂದಿದೆ. ಆಯುರ್ವೇಧ, ಗುಡಮೂಲಿಕೆ, ಪ್ರಕೃತಿ ಚಿಕಿತ್ಸೆಯ ಔಷಧಿ ಉತ್ಪನ್ನಗಳ ತಯಾರಿಕೆಯಲ್ಲಿ ತೆಂಗಿನ ಚಿಪ್ಪನ್ನು ಬಳಸಲಾಗುತ್ತಿದೆ. ಸೌಂದರ್ಯ ವರ್ಧಕಗಳ ಉತ್ಪನ್ನಗಳ ತಯಾರಿಕೆಯಲ್ಲಿಯೂ ಇದನ್ನು ಹೆಚ್ಚಾಗಿ ಬಳಸಲಾಗುತ್ತಿದೆ.

ರೋಗಬಾಧೆಯಿಂದಾಗಿ ತೆಂಗಿನ ಇಳುವರಿಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದರಿಂದಾಗಿ ತೆಂಗಿನ ಚಿಪ್ಪಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಬೇಡಿಕೆ ಹೆಚ್ಚಾಗಿರುವುದರಿಂದ ಕರಾವಳಿ, ಮಲೆನಾಡು, ಭಾಗದಲ್ಲಿ ಪ್ರಮುಖ ತೆಂಗು ಬೆಳೆಯುವ ಭಾಗದಲ್ಲಿ ವ್ಯಾಪಾರಿಗಳು ಹಾಗೂ ಮಧ್ಯವರ್ತಿಗಳು ನೇರವಾಗಿ ರೈತರ ತೋಟಗಳಿಗೆ ತೆರಳಿ ಉತ್ತಮ ಬೆಲೆ ನೀಡಿ ತೆಂಗಿನ ಚಿಪ್ಪು ಖರೀದಿಸುತ್ತಿದ್ದಾರೆ ಎನ್ನಲಾಗಿದೆ.

ಕರ್ನಾಟಕದಲ್ಲಿ ಕೊಬರಿ ಚಿಪ್ಪಿನಿಂದ ತರಾರಾಗುವ ಇದ್ದಿಲಿಗೆ ಹೊರ ರಾಜ್ಯದಲ್ಲಿ ಭಾರಿ ಬೇಡಿಕೆಯಿದೆ. ಇದರಿಂದಾಗಿ ವ್ಯಾಪಾರಿಗಳು ಚಿಪ್ಪನ್ನು ಇದ್ದಿಲಾಗಿ ಪರಿವರ್ತಿಸಿ ಹೊರ ರಾಜ್ಯಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಸಣ್ಣ ಪ್ಯಾಕೇಟ್ ಮಾಡಿ ವಿದೇಶಕ್ಕೂ ರಫ್ತು ಮಾಡಲಾಗುತ್ತಿದೆ.
ಹೀಗೆ ಹಲವು ಕಾರಣಗಳಿಂದಾಗಿ ತೆಂಗಿನ ಚಿಪ್ಪಿಗೆ ಹೆಚ್ಚಿನ ಬೇಡಿಕೆ ಬಂದಿದೆ.There is a huge demand for charcoal produced from coconut shells in Karnataka outside the state.