ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಪೆಡ್ನೆ ತಾಕೂಕಿನ ಮಾಂದ್ರೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ಇಬ್ಬರು ಅಫ್ಘಾನ್ ಪ್ರಜೆಗಳನ್ನು ( Two Afghan nationals who had settled illegally) ಮಾಂದ್ರೆ ಪೋಲಿಸರು ಬಂಧಿಸಿದ್ದಾರೆ. ಈ ಇಬ್ಬರೂ ಅಫ್ಘಾನಿಗಳು ವೀಸಾ ಮತ್ತು ಪ್ರಯಾಣದ ದಾಖಲೆಗಳಿಲ್ಲದೆಯೇ ಗೋವಾದಲ್ಲಿ ವಾಸ್ತವ್ಯ ಹೂಡಿದ್ದರು ಎಂದು ಪೋಲಿಸರು ನಡೆಸಿದ ತನಿಖೆಯಿಂದ ತಿಳಿದುಬಂದಿದೆ.

ಅಫ್ಘಾನ್ ಪ್ರಜೆ ಶುಕ್ರವಾರ ಸಂಜೆ ಹರ್ಮಲ್ ಬೀಬ್ ನಲ್ಲಿ ತಿರುಗುತ್ತಿದ್ದಾಗ ಪೋಲಿಸರಿಗೆ ಸಿಕ್ಕಿಬಿದ್ದಿದ್ದಾನೆ. ಈತ ವಿಚಾರಣೆಯ ವೇಳೆ ವೀಸಾ ಇಲ್ಲದೆಯೇ ಗೋವಾದಲ್ಲಿ ವಾಸಿಸುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಇನ್ನೊಂದು ಪ್ರಕರಣದಲ್ಲಿ ಅಫ್ಘಾನ್ ಪ್ರಜೆ ಮೊಹಮ್ಮದ್ ನಾಸಿರ್ ಹಮೀದ್ (29) ಈತ ಮಾಂದ್ರೆಯ ಅಕ್ಕಾಬೆಲಾ ರೆಸಾರ್ಟ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದಾನೆ. ಈತನ ಬಳಿಯೂ ವೀಸಾ ಮತ್ತು ಪ್ರಯಾಣದ ಯಾವುದೇ ದಾಖಲಾತಿಗಳಿಲ್ಲ ಎಂದು ಪೋಲಿಸರಿಗೆ ತನಿಖೆಯಿಂದ ತಿಳಿದುಬಂದಿದೆ.
ಈ ಎರಡೂ ಪ್ರಕರಣದಲ್ಲಿ ಪೋಲಿಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಉದ್ದೇಶದ ಕುರಿತು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.Inquiring into the purpose of illegally residing in India.