ಸುದ್ದಿ ಕನ್ನಡ ವಾರ್ತೆ
ಜೊಯಿಡಾ :ಮಂಗಳವಾರ ಜೊಯಿಡಾ ತಹಶೀಲ್ದಾರ್ ಕಚೇರಿಗೆ ಲೋಕಾಯುಕ್ತ ದಾಳಿ ನಡೆಯಿತು. ಅದರಂತೆ ಜಿಲ್ಲೆಯ 12 ತಾಲೂಕಾ ಕೇಂದ್ರಗಳಲ್ಲಿ ದಂಡಾಧಿಕಾರಿ ಗಳ ಕಛೇರಿ ಗಳ ಮೇಲೂ ಧಾಳಿ ನಡೆದಿದೆ.
ಈ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಬೆಳಿಗ್ಗೆ 11 ಗಂಟೆಗೆ ಜೋಯಿಡಾ ಕಚೇರಿ ಗೆ ಬಂದ ಈ ಅಧಿಕಾರಿಗಳ ತಂಡ ದಲ್ಲಿ ಸುಮಾರು 8 ಜನರಿದ್ದರು. ಜನರ ಕೆಲಸ ಹೇಗೆ ನಡೆಯುತ್ತಿದೆ, ಎಷ್ಟು ಕಡತಗಳು ಬಾಕಿ ಉಳಿದು ಕೊಂಡಿವೆ, ಕೆಲಸಗಳ ಪ್ರಗತಿ ಹೇಗಿದೆ, ಸಿ ಸಿ ಟಿ ವಿ ಕಾರ್ಯ ಚಟುವಟಿಕೆಗಸಲು ಹೇಗಿವೆ, ಕಚೇರಿಗಳಿಗೆ ಕೆಲಸಕ್ಕೆ ಬರುವ ಜನತೆ ಗಳಿಗೆ ಅಧಿಕಾರಿಗಳ ಸಂಬಂಧ ವರ್ತನೆ ಗಳು ಹೇಗಿವೆ ಎಂದೆಲ್ಲ ಪರಿಶೀಲಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ತಂಡ ಎಲ್ಲಾ ವಿಭಾಗಗಳಿಗೆ ಹೋಗಿ ಅಲ್ಲಿನ ಖಡತ ಪರಿಶೀಲಿಸಿ ವಿಡಿಯೋ ಮಾಡಿದೆ. ಮತ್ತು ಅಲ್ಲಿ ಇರುವ ಕಡತಗಳ ಸಂಖ್ಯೆ ಬಾಕಿ ಇರುವ ಕಡತಗಳು , ಹೀಗೆ ವಿವಿಧ ರೀತಿಯಿಂದ ಪರಿಶೀಲಿನೆ ನಡೆಸಿದೆ. ಮತ್ತು ಎಲ್ಲರ ಮೊಬೈಲ್ ಪಡೆದು ಪರಿಶೀಲನೆ ನಡೆಸಲಾಗಿದೆ.ಜೊತೆಗೆ ಎಲ್ಲ ವಿಭಾಗಗಳಲ್ಲಿಯೂ ಇರುವ ಮಾಹಿತಿ ಪಡೆಯಲು ದಿನವಿಡೀ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ .
ಕಚೇರಿ ಕೆಲಸಕ್ಕೆ ಬಂದವರಿಗೆ ತೊಂದರೆ ಆಗಿಲ್ಲ.ಸಾಯಂಕಾಲದ ವರೆಗೂ ತನಿಖೆ ನಡೆದಿದೆ, ಯಾವುದೇ ಅಹಿತಕರ ಘಟನೆ ನಡೆದಿಲ್ಲ.ಎಂದು ತಿಳಿದು ಬಂದಿದೆ.
