Banner Ad

ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ತಾಲೂಕಿನ ಬ್ರೇಕ್ ಫೇಲ್ ಆಗಿ ಸಾರಿಗೆ ಬಸ್ಸೊಂದು ಗಟಾರಕ್ಕಿಳಿದ ಘಟನೆ ಕಳಚೆಯ ನೆಲೆಮನೆ ಕ್ರಾಸ್ ಬಳಿ ನಡೆದಿದೆ. ಚಾಲಕನ ಸಮಯ ಪ್ರಜ್ಞೆಯಿಂದಾಗಿ ಭಾರಿ ಅನಾಹುತ ತಪ್ಪಿದೆ.

ಯಲ್ಲಾಪುರದಿಂದ ಕಳಚೆಗೆ ಹೊರಟಿದ್ದ ಬಸ್ ಲ್ಲಿ ವಿದ್ಯಾರ್ಥಿಗಳೂ ಸೇರಿ 22 ಜನ ಪ್ರಯಾಣಿಸುತ್ತಿದ್ದರು. ಕಳಚೆಯ ಘಟ್ಟ ಇಳಿಯುತ್ತಿದ್ದ ವೇಳೆ ಬ್ರೇಕ್ ಫೇಲ್ ಆಗಿದ್ದು, ಚಾಲಕ ಬಸ್ ನ್ನು ಸುರಕ್ಷಿತವಾಗಿ ಗಟಾರಕ್ಕೆ ಇಳಿಸಿ ಅಪಾಯವನ್ನು ತಪ್ಪಿಸಿದ್ದಾರೆ.

Banner Ad

ಬಸ್ ನ ಮುಂಭಾಗ ಸ್ವಲ್ಪ ಜಖಂಗೊಂಡಿದ್ದು, ಪ್ರಯಾಣಿಕರಿಗೆ ಯಾವುದೇ ಅಪಾಯ ಉಂಟಾಗಿಲ್ಲ. ಕಳಚೆಯ ರಸ್ತೆ ಸಂಪೂರ್ಣ ಇಳಿಜಾರಾಗಿದ್ದು, ತಿರುವಿನಿಂದ ಕೂಡಿದೆ. ಒಂದು ಬದಿಯಲ್ಲಿ ಕಂದಕವೂ ಇದೆ. ಬಸ್ ಕಂದಕಕ್ಕೆ ಉರುಳಿದ್ದರೆ ಭಾರಿ ಅನಾಹುತ ಉಂಟಾಗುತ್ತಿತ್ತು. ಚಾಲಕನ ಸಮಯಪ್ರಜ್ಞೆ ಅಪಾಯವನ್ನು ತಪ್ಪಿಸಿದೆ.

Banner Ad