ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಕರಂಜೋಯಿಡಾ ಗ್ರಾಮ ವ್ಯಾಪ್ತಿಯ ಖಾನಗಾಂವ ಗ್ರಾಮದಲ್ಲಿ ಉತ್ತಮ ಮಳೆಯ ಹಿನ್ನೆಲೆ ರೈತರು ಭತ್ತದ ಹಂಗಾಮಿನ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
ಈಗಾಗಲೇ ಉಳುಮೆ ಪೂರ್ಣಗೊಳಿಸಿರುವ ರೈತರು ತಮ್ಮ ಗದ್ದೆಗಳಲ್ಲಿ ಭತ್ತದ ಬೀಜ ಬಿತ್ತನೆ ಕಾರ್ಯವನ್ನು ಆರಂಭಿಸಿದ್ದು, ಕೃಷಿ ಚಟುವಟಿಕೆಗಳು ಭರದಿಂದ ಸಾಗುತ್ತಿವೆ. ಉತ್ತಮ ಮಳೆಯಾಗಿರುವುದರಿಂದ ಈ ವರ್ಷದ ಭತ್ತದ ಬೆಳೆ ಉತ್ತಮ ಇಳುವರಿ ನೀಡುವ ನಿರೀಕ್ಷೆಯನ್ನು ರೈತರು ವ್ಯಕ್ತಪಡಿಸಿದ್ದಾರೆ.
ಗ್ರಾಮದ ಬಹುತೇಕ ರೈತರು ಬೆಳಿಗ್ಗೆಯಿಂದಲೇ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದು, ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಖಾನಗಾಂವ ಗ್ರಾಮದಲ್ಲಿ ಚುರುಕುಗೊಂಡಿವೆ. ಅದೇ ರೀತಿಯಾಗಿ ತಾಲೂಕಿನ ಜೋಯಿಡಾ ಹಾಗೂ ರಾಮನಗರ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿನ ಪಂಚಾಯತಗಳಲ್ಲಿ ಬಿತ್ತನೆ ಕಾರ್ಯ ಜೋರಾಗಿ ನಡೆದಿದೆ.
