ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಕರಂಜೋಯಿಡಾ- ಖಾನಗಾಂವ ಗ್ರಾಮದಲ್ಲಿ ರೈತರು ತಮ್ಮ ಸಾಂಪ್ರದಾಯಿಕ ದನದ ಕೊಟ್ಟಿಗೆಗೆ ಹೊಸದಾಗಿ ಹುಲ್ಲಿನ ಛಾವಣಿ (ಮೇಲುಕಟ್ಟು) ಹಾಕುವ ಕಾರ್ಯವನ್ನು ಕೈಗೊಂಡಿದ್ದಾರೆ. ಮುಂಗಾರು ಮಳೆಯು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದನ-ಕರುಗಳನ್ನು ಮಳೆ, ಗಾಳಿ ಹಾಗೂ ಬಿಸಿಲಿನಿಂದ ರಕ್ಷಿಸುವ ಉದ್ದೇಶದಿಂದ ಈ ಕೆಲಸ ನಡೆಯುತ್ತಿದೆ.

ಗ್ರಾಮಸ್ಥರು ಒಟ್ಟಾಗಿ ಕೊಟ್ಟಿಗೆಯ ಮೇಲ್ಬಾಗಕ್ಕೆ ಒಣಹುಲ್ಲು ಅಳವಡಿಸಿ, ಸಾಂಪ್ರದಾಯಿಕ ವಿಧಾನದಲ್ಲಿ ಛಾವಣಿ ನಿರ್ಮಿಸಲಾಗುತ್ತದೆ. ಕಂಡುಬರುತ್ತದೆ.ಇಂತಹ ಹುಲ್ಲಿನ ಛಾವಣಿಯ ಕೊಟ್ಟಿಗೆಗಳು ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಬಳಕೆಯಲ್ಲಿದ್ದು, ಪಶುಗಳಿಗೆ ತಂಪಾದ ಮತ್ತು ಸುರಕ್ಷಿತ ವಾತಾವರಣ ಒದಗಿಸುತ್ತವೆ.