Banner Ad

ಸುದ್ದಿ ಕನ್ನಡ ವಾರ್ತೆ

ಛತ್ರಪತಿ ಶಿವಾಜಿ ಮಹಾರಾಜರ‌ ಸಾಹಸ ಶೌರ್ಯ ಧೈರ್ಯ ಮತ್ತು ಧರ್ಮ ಪ್ರೇಮವನ್ನು ನಾವೆಂದೂ ಮರೆಯುವಂತಿಲ್ಲ, ಪ್ರಜೆಗಳಲ್ಲಿ ರಾಷ್ಟ್ರೀಯತೆಯನ್ನು ಬಿತ್ತಿ, ಇಡೀಯ ಹಿಂದೂ ಸಮಾಜವನ್ನು ರಕ್ಷಿಸಿದ ಧೀಮಂತ ನಾಯಕ ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ಜಯಂತಿಯಂದು ನಾವೆಲ್ಲರೂ ಅವರ ಆದರ್ಶಗಳನ್ನು ಪಾಲಿಸೋಣ ಎಂಬ ಸಂದೇಶವನ್ನು ಸಾರುತ್ತ ಇಂದು ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಸುನಿಲ್ ಹೆಗಡೆಯವರು ಹಳಿಯಾಳ ನಗರದ ಶ್ರೀ ಶಿವಾಜಿ ವೃತ್ತದ ಹಾಗೂ ಕಿಲ್ಲಾ ಎದುರು ಇರುವ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನಗಳನ್ನು ಸಲ್ಲಿಸಿದರು, ಶಿವಾಜಿ ವೃತ್ತದ ಮೂಲಕ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯು ಈ ಸುಸಂದರ್ಭದಲ್ಲಿ ಶಿವ ಘರ್ಜನ ಮಂತ್ರ ಪಠಿಸಿದ್ದು ವಿಶೇಷವಾಗಿತ್ತು.

Banner Ad

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ವಿಠ್ಠಲ ಸಿದ್ದನ್ನವರ, ನಾರಾಯಣ ಕೇಸರೇಕರ, ಮಾರುತಿ ಭೋಸಲೆ, ಪ್ರದೀಪ್ ಹಿರೇಕರ, ಪ್ರಶಾಂತ ನಾಯ್ಕ, ಉಮೇಶ್ ದೇಶಪಾಂಡೆ, ಶಾಂತಾ ಹಿರೇಕರ, ಸಂತಾನ ಸಾವಂತ್, ಪ್ರಕಾಶ್ ಕೊರವರ, ಚಂದ್ರಕಾಂತ ಕಮ್ಮಾರ, ನಿತಿನ ವಾವಳ, ರಾಘವೇಂದ್ರ ಸಾಂಬ್ರೇಕರ, ಯಲ್ಲಪ್ಪ ಹೇಳವರ್, ಜ್ಞಾನೇಶ್ ಮಾನಗೆ, ಸುಶಾಂತ್ ಬೆಣಚೇಕರ್, ರಾಜು ನಿಂಗನಗೌಡಾ, ಪಾಯಣ್ಣಾ ಲಕ್ಕನಗೌಡ್ರ, ಮಹೇಶ್ ಮಳಿಕ, ಶಿವಾಜಿ ಗೌಡಪ್ಪನವರ, ಗುಂಡು ಪಾಟೀಲ್, ಶಿವಾಜಿ ಜಾಧವ, ನಾಗೆಂದ್ರ ಮಿರಾಶಿ, ವಿಶ್ವನಾಥ್ ನಾಯ್ಕೊಜಿ, ಕುಮಾರ್ ಸವದತ್ತಿ, ಪವನ್ ಪಾಟೀಲ್ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.

Banner Ad