ಸುದ್ದಿ ಕನ್ನಡ ವಾರ್ತೆ
ಹಣ್ಣುಗಳ ರಾಜ ಹಲಸಿನ ಮೇಳ ವನ್ನು ವಿವಿಧ ಇಲಾಖೆ ಗಳ ನೆರವಿನಿಂದ ಜೋಯಿಡಾ ದಲ್ಲಿ ಸಂಘಟಿಸಲಾಗಿತ್ತು
ಜೊಯಿಡಾ ದಲ್ಲಿ ಮೊಟ್ಟ ಮೊದಲ ಬಾರಿ ಹಲಸಿನ ಮೇಳವನ್ನು ಸಂಘಟಿಸಿದ್ದೇವೆ. ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ತಾಲೂಕಾ ತಹಶೀಲ್ದಾರ ಮಂಜುನಾಥ ಮನ್ನೊಳ್ಳಿ ಹೇಳಿದರು.
ಅವರು ಬುಧವಾರ ಜೋಯಿಡಾ ತಾಲೂಕಿನ ಕುಣಬಿ ಸಮುದಾಯ ಭವನದಲ್ಲಿ ಹಲಸಿನ ಮೇಳವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಾಕಷ್ಟು ಜನ ಹಲಸು ಬೆಳೆಯುವವರು ಇದ್ದಾರೆ ಆದರೆ ಅವರು ಪ್ರಮುಖ ಬೆಳೆಯನ್ನಾಗಿ ಹಲಸನ್ನು ಬೆಳೆಯುತ್ತಿಲ್ಲ. ಹಲಸಿಗೆ ಈಗ ಸಾಕಷ್ಟು ಬೇಡಿಕೆ ಬಂದಿರುವ ಕಾರಣ ಉತ್ತಮವಾಗಿ ಬೆಳೆ ಬೆಳೆದು ವ್ಯಾಪಾರದಲ್ಲಿ ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದರು. ಶಾಸಕರ ಸೂಚನೆಯಂತೆ ಈ ಮೇಳವನ್ನು ಹಮ್ಮಿಕೊಂಡಿದ್ದು ತೋಟಗಾರಿಕೆ ಇಲಾಖೆಯವರು ಉತ್ತಮ ಸಹಕಾರ ನೀಡಿದ್ದಾರೆ ಎಂದರು. ಕಾಳಿ ಬ್ರಿಗೇಡ್ ಮುಖ್ಯಸ್ಥ ರವಿ ರೆಡ್ಕರ್ ಮಾತನಾಡಿ ಈ ತಾಲೂಕಿನಲ್ಲಿ ಕಾಳಿನದಿಗೆ ಡ್ಯಾಂ ಆಗುವುದಕ್ಕಿಂತ ಮೊದಲು 47 ಹಳ್ಳಿಗಳ ಜನರು ವಾಸವಿದ್ದ ಸ್ಥಳ ಈಗ ಇಲ್ಲ. ಆ ಸ್ಥಳಗಳಲ್ಲಿ ಸುವಾಸನೆ ಭರಿತ ಬಂಗಾರದ ಕಡ್ಡಿ ಬತ್ತ, ಬೆಳೆಯುತ್ತಿದ್ದರು , ಆಗ ಅಲ್ಲಿ ಬೆಳೆಯುವ ಲಿಂಬೆ ಹಣ್ಣನ್ನು ಕತ್ತರಿಸಿದರೆ ಅಕ್ಕ ಪಕ್ಕ ದೂರದ ವರೆಗೂ ಅದರ ಪರಿಮಳ ಬರುತ್ತಿತ್ತು . ಆಗ ಕೂಡ ಹಲಸು ಬಕ್ಕೆ ಮಾವುಗಳ ಭರಪೂರ ಬೆಳೆ ಇತ್ತು. ಈಗಲೂ ಆ ದಿಶೆಯಲ್ಲಿ ಯೋಜನೆ ಮಾಡಿದರೆ ತಾಲೂಕಿನಿಂದ ಹೊರಗೆ ಹೋದ ಹತ್ತು ಸಾವಿರಕ್ಕೂ ಹೆಚ್ಚು ಯುವಕರು ಬಂದು ಇಲ್ಲಿ ಕೃಷಿ ಮಾಡುವಂತಾದರೆ ಅವರಿಗೆ ಸಹಕಾರ. ಸಿಕ್ಕಿದರೆ ದೇಶಕ್ಕೆ ಬೇಕಾದ ಸಾವಯವ ಹಣ್ಣುಗಳನ್ನು ಕೊಡಲು ಜೊಯಿಡಾ ದಿಂದ ಸಾಧ್ಯವಾಗುತ್ತದೆ ಎಂದರು. ತೋಟಗಾರಿಕಾ ಇಲಾಖೆಯಜಂಟಿ ನಿರ್ದೇಶಕರು ಬಿ ಪಿ ಸತೀಶ್ ಮಾತನಾಡಿ ಹಲಸು ಕೂಡ ತೆಂಗಿನಂತೇ ಕಲ್ಪ ವೃಕ್ಷದಂತೆ ಎಂದು ಹಲಸಿನ ವಿವಿಧ ಬಗೆ, ವಿವಿಧ ಉಪಯೋಗ ನೈಸರ್ಗಿಕ ಉಪಯೋಗ ಗಳನ್ನು ಅದರಲ್ಲಿನ ವಿವಿಧ ಜಾತಿಯ ಬಗ್ಗೆ ವಿವರಿಸಿದರು.
ಸಂಜೀವಿನಿ ಒಕ್ಕೂಟದ ಮತ್ತು ಪ್ರೇರಣಾ ಸಂಸ್ಥೆಯ ಅಧ್ಯಕ್ಷೆ ಸುಕನ್ಯಾ ದೇಸಾಯಿ , ಕಾಂಗ್ರೆಸ್ ಮುಖಂಡ ಕೆಪಿಸಿಸಿ ಸದಸ್ಯ ಸದಾನಂದ ದಬಗಾರ ಇತರರು ಹಲಸಿನ ವೈವಿಧ್ಯತೆ ಬಗ್ಗೆ ಉಪಯೋಗದ ಬಗ್ಗೆ ಮುಂದೆ ಮಾಡಬಹುದಾದ ಯೋಜನೆಗಳ ಕುರಿತು ಮಾತನಾಡಿದರು.
ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಈ ಓ ಎನ್ ಭಾರತಿ ಅವರು ಮಾತನಾಡುತ್ತ ತಾಲೂಕಿನಲ್ಲಿ ಹಲಸಿನ ಮೇಳ ಮಾಡಲು ತೋಟಗಾರಿಕಾ ಇಲಾಖೆಯ ರಮೇಶ ತುರಮುರಿ ತುಂಬಾ ಸಹಕಾರ ನೀಡಿದ್ದಾರೆ. ತೋಟಗಾರಿಕಾ ಇಲಾಖೆಯ ಹಿರಿ ಕಿರಿಯ ಅಧಿಕಾರಿಗಳ ನೆರವಿನಿಂದ ನಡೆದ ಕಾರ್ಯಕ್ರಮ ಇದು ಜೋಯಿಡಾ ದಲ್ಲಿ ಸಾಕಷ್ಟು ಹಲಸಿನ ಬೆಳೆ ಬೆಳೆದರೂ ಹಾಳಾಗುವುದೇ ಹೆಚ್ಚು , ಇನ್ನು ಮುಂದೆ ಹಲಸು ಹಾಳಾಗದಂತೆ ನೋಡಬೇಕು. ಹಸಿದು ಹಲಸು ತಿನ್ನು ಉಂಡು ಮಾವು ತಿನ್ನು ಎನ್ನುವ ಗಾದೆ ಹಿಂದಿನಿಂದ ಇದೇ. ಹಾಗಾಗಿ ಹಲಸು ಕೇವಲ ಬೆಳೆ ಆಗಿರದೆ ಅದಕ್ಕೆ ಪೂಜ್ಯ ಭಾವನೆಯು ಇದೆ. ಅದನ್ನು ಉಳಿಸಿ ಬೆಳೆಸಿ ಉಪಯೋಗ ಎಲ್ಲರಿಗೂ ಸಿಗುವಂತೆ ಮಾಡೋಣ ಪ್ರವಾಸಿಗರಿಗೆ ರೆಸಾರ್ಟ್ ಮೂಲಕ ಸಿಗುವಂತೆ ನೋಡಿಕೊಳ್ಳೋಣ ಎಂದರು. ವೇದಿಕೆ ಮೇಲಿದ್ದ ಹಲವು ಗಣ್ಯರು ಅಧಿಕಾರಿಗಳು ಹಲಸಿನ ಮೇಳದ ಮಹತ್ವದ ಕುರಿತು ಮಾತನಾಡಿದರು. ಹಲಸಿನ ಮೇಳಕ್ಕೆ
ತಾಲೂಕಿನಿಂದ ಬಂದ ನೂರಾರು ಬೆಳೆಗಾರರು ಹಲಸಿನ ವಿವಿಧ ತಿಂಡಿ ಚಿಪ್ಸ್ , ಸಂಡಿಗೆ ಸೇರಿದಂತೆ 60ಕ್ಕೂ ಹೆಚ್ಚು ಹಲಸಿನ ಖಾದ್ಯ ತಯಾರಿಸಿ ತಂದಿದ್ದರು. ಸಾಕಷ್ಟು ಹಲಸಿನ ಹಣ್ಣು, ಹಲಸಿನ ಗಿಡ ಮಾವಿನ ಗಿಡ ಗಳು ಆಕರ್ಷಣೆಯಾಗಿದ್ದವು.
