Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಕಾತೇಲಿ(ಕುಂಬಾರವಾಡಾ)ಗ್ರಾಮ ಪಂಚಾಯತ ವ್ಯಾಪ್ತಿಯ ಡೇರಿಯೆ ಗ್ರಾಮದ ಶ್ರೀ ಸಿದ್ಧನಾಥ ದೇವರ ವಾರ್ಷಿಕೋತ್ಸವ ಪ್ರಯುಕ್ತ ರಾತ್ರಿ ಭಕ್ತರ ವಿಶೇಷ ಮನರಂಜನೆಗಾಗಿ ಡೇರಿಯೆ ಗ್ರಾಮದ ಯುವ ಕಲಾವಿದರಿಂದ ವಿಶ್ವಾಸ ಪಾಟೀಲ ವಿರಚಿತ ಸಂಗೀತ ಐತಿಹಾಸಿಕ ಪಾವನ ಖಿಂಡಿಚಾ ರಣ ಜಂಜಾರ ಎಂಬ ಮರಾಠಿ ನಾಟಕದ ಪ್ರದರ್ಶನ ನೆರೆದಿದ್ದ ಪ್ರೇಕ್ಷಕರ ಮನ ಸೂರೆಗೊಂಡಿತು.

Banner Ad

ನಾಟಕದ ಪುರುಷ ಪಾತ್ರದಲ್ಲಿ ಮೋಹನ ಡೇರೆಕರ (ಶಿವಾಜಿ ರಾಜೇ ),ಅಖಿಲ್ ಡೇರೆಕರ (ರಾಣೋಜಿ ರಾವ್),ಉದಯ ದೇಸಾಯಿ( ಬಾಜಿ ಪ್ರಭು), ಜಯಂತ ಗಾವಡಾ (ಬರ್ಹಿಜಿ),ರವೀಂದ್ರ ಡೇರೆಕರ (ಗ್ವಾದಾಜಿ).ನಿವಾಸ ಡೇರೆಕರ (ಫಜಲ್ ಖಾನ್),ನರೇಶ ಡೇರೆಕರ (ಸಿದ್ಧಿ ಜೋಹರ್),ಮನೋಜ ಡೇರೆಕರ (ಶೇರ್ ಜಂಗ್) ಮನೋಜ್ಞ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದರು. ಸ್ರೀ ಪಾತ್ರದಲ್ಲಿ ಪೂಜಾ ಕೊಲ್ಲಾಪುರ (ಮೋಹನಾ)ಉತ್ತಮ ಅಭಿನಯವನ್ನು ಪ್ರದರ್ಶಿಸಿದರು.ಇನ್ನುಳಿದ ಪಾತ್ರದಲ್ಲಿ ರೋಹಿತ, ಆಶಿಶ್, ದೇವರತ್, ರೋಹನ್ ಅಭಿನಯಿಸಿದರು.

ನಿರ್ದೇಶನಕರು ಗಣಶ್ಯಾಮ್ ಡೇರೆಕರ,ಸಹ ನಿರ್ದೇಶಕರು ಕಿರಣ ಡೇರೆಕರ,ಸಚಿನ್ ಡೇರೆಕರ, ಸಂಗೀತ ವಿಭಾಗದಲ್ಲಿ ತಬಲಾ ಬಾಪು ವೆಲ್ಲಾಲ, ಹಾರ್ಮೋನೀಯಂ ಪಟು ಗಾವಡೆ,ಸಂಗೀತ ದೀಪಕ ಡೇರೆಕರ, ಪ್ಯಾಡ್ ಸಚಿನ್ ವೇಳಿಪ ಕಾಸರಗಾಳಿ,ಗಾಯಕಿ ಸಂಸ್ಕ್ರತಿ ಕೊಲ್ಲಾಪುರ,ಸ್ಟೇಜ್ ಮ್ಯಾನೇಜರ್ ರವಿಶಂಕರ ಡೇರೆಕರ, ಮಾರ್ಗದರ್ಶನ ಜಯಾನಂದ ಡೇರೆಕರ,ರಂಗಸಜ್ಜಿಕೆ,ಧ್ವನಿವರ್ಧಕ,ಬೆಳಕು,ಶ್ರೀ ಮಲ್ಲಿಕಾರ್ಜುನ ಆರ್ಟ್ಸ್ ಸಿಟ್ಟೇಗಾಳಿ,ಸಹಕಾರ ಊರಿನ ಹಿರಿಯರಾದ ಹಂಬೀರ ಗಣಬಾ ಡೇರೆಕರ,ನಾನಾ ಡೇರೆಕರ,ಪ್ರೇಮಾನಂದ ಡೇರೆಕರ,ಅಶೋಕ ಡೇರೆಕರ, ರಾಯಾ ಡೇರೆಕರ, ಜಯಂತ ಗಾವಡಾ,ಊರಿನ ಸಮಸ್ತ ನಾಗರೀಕರು,ಶ್ರೀ ಸಿದ್ಧನಾಥ ದೇವಸ್ಥಾನದ ಅಧ್ಯಕ್ಷರು,ಸರ್ವ ಸದಸ್ಯರು ಉತ್ತಮ ಸಹಕಾರ ನೀಡಿದರು.

ಮಹಾಪೂಜೆ,ಸವಾಲ್ ಹಾಗೂ ನಾಟಕ ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮ ಪಂಚಾಯತ ಜನಪ್ರತಿನಿಧಿಗಳು,ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು. ಜಾತ್ರೆಯಲ್ಲಿ ಪೂಜಾ ಸಾಮಗ್ರಿಗಳ,ಮಿಠಾಯಿ,ಭಜಿ, ಜಿಲೇಬಿ,ಮಹಿಳೆಯರ ಅಲಂಕಾರ ವಸ್ತುಗಳ,ಮಕ್ಕಳ ಆಟಿಕೆಯ ವಸ್ತುಗಳ,ಇನ್ನಿತರ ಅಂಗಡಿಗಳಲ್ಲಿ ಭರ್ಜರಿಯ ವ್ಯಾಪಾರ ನಡೆಯಿತು.

Banner Ad