ಸುದ್ದಿ ಕನ್ನಡ ವಾರ್ತೆ
ಶಿರಸಿ: ಶ್ರೀ ಕ್ಷೇತ್ರ ಮಂಜುಗುಣಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಧಿಕ ಜೇಷ್ಠ ಮಾಸದ ಕಾರ್ಯಕ್ರಮವನ್ನು ಜೂ. 7ರಂದು ಆಯೋಜಿಸಲಾಗಿದೆ.
ಪ್ರತಿ 3 ವರ್ಷಗಳಿಗೊಮ್ಮೆ ಬರುವ ಅಪರೂಪದ ಅಧಿಕ ಮಾಸದ ಅಂಗವಾಗಿ ಈ ವಿಶೇಷ ಕಾರ್ಯಕ್ರಮ ನಡೆಯುತ್ತಿದೆ. ಅಂದು ಶ್ರೀ ದೇವರ ಗರ್ಭಗುಡಿಯಲ್ಲಿ ಬೆಳಿಗ್ಗೆ 8:30 ಗಂಟೆಗೆ ವಿಶೇಷ ಪೂಜೆ ನಡೆಯಲಿದ್ದು, ಶ್ರೀದೇವರ ಮೂಲಮೂರ್ತಿಗೆ ಶತಧಾರಕ್ಷೀರಾಭಿಷೇಕ ನೆರವೇರಿಸಲಾಗುತ್ತದೆ. ಬೆಳಿಗ್ಗೆ 11ರಿಂದ ನೂತನ ಭೂ ವೈಕುಂಠ ದ್ವಾರ ಮಂಟಪದಲ್ಲಿ, ರಜತ ಪೀಠದಲ್ಲಿ ಪ್ರಧಾನ ಉತ್ಸವ ಮೂರ್ತಿಗೆ ವಿಷ್ಣು ಸಹಸ್ರನಾಮದಿಂದ ತುಳಸಿ ಅರ್ಚನೆ, ಹಾಗೂ 333 ದೀಪಾರಾಧನೆ, ದೀಪ ನಮಸ್ಕಾರ, 33 ಅಪೂಪ ಪೂಜೆ ಹಾಗೂ ದಾನ, ದ್ರವ್ಯಾಂಜಲಿ ಸೇವೆಗಳು ನೆರವೇರಲಿದೆ. ಪ್ರಸಾದ ಭೋಜನ ವ್ಯವಸ್ಥೆಯೂ ಇದೆ. ಭಕ್ತರು ತಮ್ಮ ಇಚ್ಛೆಯಂತೆ ಸೇವೆಗಳಲ್ಲಿ ಭಾಗವಹಿಸಬಹುದಾಗಿದ್ದು, ವಿವಿಧ ಸೇವೆಗಳಿಗಾಗಿ ನಿಗದಿತ ಕಾಣಿಕೆ ವಿವರಗಳನ್ನು ದೇವಸ್ಥಾನ ಪ್ರಕಟಿಸಿದೆ.ಹೆಚ್ಚಿನ ಮಾಹಿತಿಗಾಗಿ 8277226708, 6362024921, 9481585013 , 8277419657 ಸಂಪರ್ಕಿಸಲು ಕೋರಲಾಗಿದೆ.
