ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಹೊರ ಅಂಚಿನ 0 ದಿಂದ 11 ಕಿಮೀ ವರೆಗೆ ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಕೆ ಅಧಿಸೂಚನೆ ಹೊರಡಿಸಿದೆ.

ಇದರಲ್ಲಿ ಸಾಕಷ್ಟು ಲೋಪದೋಷಗಳು ಇದ್ದು ಅರಣ್ಯವಾಸಿಗಳ ನಿತ್ಯಜೀವನದ ಸಮಸ್ಯೆ ಮತ್ತು ಮೂಲಭೂತ ಸೌಕರ್ಯಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ,ಈ ಅಧಿಸೂಚನೆ ತಕ್ಷಣವೇ ರದ್ದುಗೊಳಿಸಿ ಹೊಸ ಕರಡು ಅಧಿಸೂಚನೆಗೆ ಕಾಲಾವಕಾಶ ನೀಡಬೇಕೆಂದು ಕರ್ನಾಟಕ ಕಿಸಾನ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ರವಿ ರೇಡ್ಕರ್ ಸರಕಾರಕ್ಕೆ ಆಗ್ರಹಿಸಿದ್ದಾರೆ‌.

ಪರಿಸರ ರಕ್ಷಣೆಯ ಜೊತೆಗೆ ಅರಣ್ಯವಾಸಿಗಳ ಮೂಲಭೂತ ಹಕ್ಕುಗಳ ರಕ್ಷಣೆ ಕೂಡಾ ಅಷ್ಟೇ ಮಹತ್ವದಾಗಿದೆ. ಮನುಷ್ಯ ಕೂಡ ಜೀವ ವೈವಿಧ್ಯತೆಯ ಒಂದು ಭಾಗವಾಗಿದ್ದು ಅವರ ಸಮಸ್ಯೆಯನ್ನ ನೀಲಕ್ಷಿಸುವಂತಿಲ್ಲ, ಅನೇಕ ಯೋಜನೆಗಳಿಂದ ತಾಲೂಕಿನ ಜನತೆ ಈಗಾಗಲೇ ಸಮಸ್ಯೆ ಅನುಭವಿಸುತ್ತಿದೆ ,ಹಳ್ಳಿಗಳ ಮೂಲಭೂತ ಸೌಕರ್ಯಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದರು ಇನ್ನೂ ಕೆಲ ಹಳ್ಳಿಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ,ಪರಿಸರ ಪ್ರವಾಸೋದ್ಯಮ ಕ್ಷೇತ್ರದಲ್ಲೂ ಈ ಅಧಿಸೂಚನೆ ಹಾನಿಯಾಗಲಿದೆ, ಈ ಯೋಜನೆಯಿಂದಾಗಿ ಹಳ್ಳಿಗಳಿಗೆ ರಸ್ತೆಗಳೇ ಆಗಲು ಸಾಧ್ಯವಿಲ್ಲ, ಗುಡಿ ಕೈಗಾರಿಕೆಗೆ ಸರ್ಕಾರ ಅವಕಾಶ ನೀಡಿದರು ಇಲ್ಲಿ ಸ್ಥಳಾವಕಾಶ ಇಲ್ಲ, ಪಾರಂಪರಿಕ ಉಸುಕು ತೆಗೆಯುವ ಬಗ್ಗೆ ಏನು ಉಲ್ಲೇಖಗಳಿಲ್ಲ, ವಸತಿ ಸಂಕೀರ್ಣಗಳಿಗೆ ಅವಕಾಶ ಇಲ್ಲವಾದ್ದರಿಂದ ಸರ್ಕಾರಿ ನೌಕರರ ವಸತಿ ನಿಲಯಗಳಿಗೆ ತೊಂದರೆ ಉಂಟಾಗಲಿದೆ. ಇರುವಂತಹ ಕೃಷಿ ಭೂಮಿಗಳ ಸೀಮೆಗೆ ತಾಗಿ ಅರಣ್ಯ ಇಲಾಖೆಯವರು ಟ್ರಂಚ್ ಹಾಕುತ್ತಿದ್ದರಿಂದ ರೈತರಿಗೆ ಇತರೆ ಚಟುವಟಿಕೆಗಳಿಗೆ ಜಾಗ ಇಲ್ಲದಂತಾಗಿದೆ, ಪಾರಂಪರಾಗತ ಕುಂಬರಿ ಹಕ್ಕು ಪಟ್ಟಾ ಗಾವಟಾನ್ ಜಮೀನುಗಳು ಸೂಕ್ಷ್ಮ ವಲಯಕ್ಕೆ ಸೇರುವುದರಿಂದ ಪರ್ಯಾಯ ಕೃಷಿ ಬೆಳೆ ತೆಗೆಯುವಂತಿಲ್ಲ ಸಾವಯವ ಕೃಷಿಗೆ ಉತ್ತೇಜನ ನೀಡಿದೆಯಾದರೂ ಸರಕಾರ ನೀರಾವರಿ ಸೌಲಭ್ಯಕ್ಕೆ ಅಧಿಸೂಚನೆಯಲ್ಲಿ ಮುಕ್ತವಾದ ಒಲವು ತೋರಿಲ್ಲ,ಇಂತಹ ಅನೇಕ ದೋಷಗಳಿಂದ ಕೂಡಿದ ಈ ಕರಡು ಅಧಿಸೂಚನೆ ತಕ್ಷಣ ರದ್ದು ಪಡಿಸಿ ಅರಣ್ಯವಾಸಿಗಳ ಹಿತರಕ್ಷಣೆ ಮಾಡುವಂತಹ ಹೊಸ ಕರಡು ಅಧಿಸೂಚನೆ ಹೊರಡಿಸಿ ಇನ್ನೂ ಕಾಲಾವಕಾಶ ನೀಡಬೇಕೆಂದು ಎಲ್ಲಾ ಅರಣ್ಯವಾಸಿಗಳು ಮತ್ತು ಎಲ್ಲಾ ಸಂಘಟನೆಗಳ ಪರವಾಗಿ ಈ ಅಧಿಸೂಚನೆ ಆಕ್ಷೇಪಣೆ ಸಲ್ಲಿಸುತ್ತಿದ್ದೇವೆ ಎಂದು ರವಿ ರೆಡ್ಕರ್ ತಿಳಿಸಿದ್ದಾರೆ