ಸುದ್ದಿ ಕನ್ನಡ ವಾರ್ತೆ

ಜೊಯಿಡಾ ತಾಲೂಕಿನ ಕುಗ್ರಾಮವಾದ ನಾಗೋಡಾ ಗ್ರಾಮ ಪಂಚಾಯತದ ವಾಗೇಲಿ ಗ್ರಾಮ ತನಕ ಇರುವ ವಸತಿ ಮತ್ತು ಮಧ್ಯಾಹ್ನದ ಬಸ್ ರಸ್ತೆ ಸರಿ ಇಲ್ಲವೆಂದು ಹೇಳಿ ಬಂದ ಮಾಡಲಾಗಿದೆ. ಈ ಕೂಡಲೇ ಬಸ್ ಸೇವೆ ಪ್ರಾರಂಭಿಸದಿದ್ದರೆ ಪ್ರತಿಭಟನೆ ಮಾಡುವುದಾಗಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ತಹಶೀಲ್ದಾರ್ ಜೊಯಿಡಾ ರವರಿಗೆ ಮನವಿ ನೀಡಲಾಗಿದೆ.

ಈ ಹಿಂದೆ ಅನೇಕ ಸಲ ಹೋರಾಟ ಮಾಡಿದ ಫಲವಾಗಿ ವಾಗೇಲಿ ಗ್ರಾಮದ ತನಕ ವಸತಿ ಮತ್ತು ಮಧ್ಯಾಹ್ನ ಎರಡು ಸಲ ಬಸ್ ಸಂಚಾರ ಮಾಡುತಿತ್ತು. ರಸ್ತೆ ಸರಿ ಇಲ್ಲ ಎನ್ನುವ ನೆಪ ನೀಡಿ ಬಸ್ ಬಂದ್ ಮಾಡಲಾಗಿದೆ. ಈ ಕೂಡಲೇ ಸೇವೆ ಪ್ರಾರಂಭಿಸದೇ ಇದ್ದರೆ ಹೋರಾಟ ಅನಿವಾರ್ಯ ಆಗಲಿದೆ ಎಂದು ಸ್ಥಳೀಯರು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕ ಅಧ್ಯಕ್ಷರಾದ ಪ್ರೇಮಾನಂದ ವೆಳಿಪ ಕಾರ್ಯದರ್ಶಿ ರಾಜೇಶ ಗಾವಡಾ , ಚಂದ್ರು ಸಾವಂತ, ಘನಶ್ಯಾಮ ಸಾವಂತ, ವಾಸುದೇವ ಮಿರಾಶಿ, ಚುಡಗೊ ಮಿರಾಶಿ, ತುಕಾರಾಮ ಸಾವಂತ, ಅನಂತ ಸಾವಂತ, ಅಶೋಕ ಸಾವಂತ, ಮಹಾದೇವ ಸಾವಂತ, ಅರುಣ ಸಾವಂತ್, ಪಾಂಡುರಂಗ ಸಾವಂತ, ಶ್ರೀಮತಿ ಸಾವಂತ, ದೇವಕಿ ಸಾವಂತ, ನಿರ್ಮಲಾ ಮಿರಾಶಿ, ಜಯಂತಿ ಸಾವಂತ, ಗೌರವಿ ಸಾವಂತ, ದಿವ್ಯಾ ಸಾವಂತ , ಚಂದ್ರಾವತಿ ಸಾವಂತ, ವಿಜಯಾ ಸಾವಂತ, ತಾರಮತಿ ಸಾವಂತ, ಪ್ರಭಾವತಿ ಸಾವಂತ ಮುಂತಾದವರು ಇದ್ದರು.