Banner Ad

ಸುದ್ಧಿಕನ್ನಡ ವಾರ್ತೆ
Goa: ಕೊಂಕಣ ರೈಲ್ವೆ ಕನ್ನಡ ಅಭಿಮಾನಿಗಳ ಬಳಗದ ಆಯೋಜಿಸುವ “ಮಹೇಂದ್ರ ಶಮಥ” ಯಕ್ಷಗಾನ ಪ್ರಸಂಗವು ಗೋವಾದ ಮಡಗಾಂವ ಕೊಂಕಣ ರೈಲ್ವೆ ಸಮುದಾಯ ಭವನದಲ್ಲಿ ಜನವರಿ 11 ರಂದು ಸಂಜೆ 6 ಗಂಟೆಗೆ ನಡೆಯಲಿದೆ.

ಯಕ್ಷಸಿರಿ ಯಕ್ಷ ಪಲ್ಲವಿ ಟ್ರಸ್ಟ (ರಿ)ಯಕ್ಷಗಾನ ಮಂಡಳಿ ಮಾಳಕೋಡ್ ಇವರಿಂದ ಯಕ್ಷಮಾಣಿಕ್ಯ ಚಿಂತನಾ ಹೆಗಡೆ ಮಾಳಕೋಡ್ ರವರ ಸಾರಥ್ಯದಲ್ಲಿ ದಕ್ಷಿಣೋತ್ತರಕನ್ನಡದಲ್ಲಿ ಅತ್ಯಂತ ಕುತೂಹಲ ಮೂಡಿಸಿರುವ ಹಾಸ್ಯಮಯ ಪೌರಾಣಿಕ ಯಕ್ಷಗಾನ ಇದೇ ಮೊದಲ ಬಾರಿಗೆ ಗೋವಾದ ಮಡಗಾಂವನಲ್ಲಿ ಚಿಂತನಾಳ ಗಾನಸುಧೆಯಲ್ಲಿ ನಡೆಯಲಿದೆ.

Banner Ad

ಭಾಗವತರಾಗಿ ಯಕ್ಷಮಾಣಿಕ್ಯ ಚಿಂತನಾ ಹೆಗಡೆ ಮಾಳಕೋಡ್, ಸತೀಶ್ ಪಟಗಾರ, ಮದ್ಧಲೆ;ಪರಮೇಶ್ವರ ಭಂಡಾರಿ ಕರ್ಕಿ, ಚಂಡೆ;ಶಿವಾನಂದ ಕೋಟಾ, ಮುಮ್ಮೇಳದಲ್ಲಿ ಗೋಪಾಲ ಆಚಾರ್ಯ ತೀರ್ಥಳ್ಳಿ, ಉದಯ ಹೆಗಡೆ ಮಾಳಕೋಡ್, ನಾಗೇಶ ಕುಳಿಮನೆ, ಸ್ತ್ರೀ ವೇಷ ನಿಹಾರಿಕಾ ಭಟ್ , ಹಾಸ್ಯ;ನಾಗೇಂದ್ರ ಭಟ್ ಮೂರೂರು ರವರು ಭಾಗವಹಿಸಲಿದ್ದಾರೆ.

ಗೋವಾದಲ್ಲಿರುವ ಯಕ್ಷಗಾನ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Banner Ad