ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಸಂಸ್ಕಾರೋತ್ಸವ ಸಂತಸ ನೀಡುತ್ತಿದೆ ಹವ್ಯಕರ ಹೆಗ್ಗುರುತು ಹವ್ಯಕ ಸಂಸ್ಕಾರ
ಅದನ್ನು ಜಾಗೃತ ಮಾಡುವುದೇ ಸಂಸ್ಕಾರೋತ್ಸವದ ಉದ್ದೇಶ ಎಂದು ಸ್ವರ್ಣ ವಲ್ಲಿ ಮಹಾ ಸಂಸ್ಥಾನದ ಶ್ರೀ ಶ್ರೀ ಮದ್ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮಿಗಳು ನುಡಿದರು.

ಅವರು ಯಲ್ಲಾಪುರ ದ ಕಾರ್ಮಿಕರ ಭವನ ದಲ್ಲಿ ನಡೆದ ಸಂಸ್ಕಾರೋತ್ಸವ ಕಾರ್ಯಕ್ರಮ ದಲ್ಲಿ ಸಾನಿದ್ಯ ವಹಿಸಿ ಮಾತನಾಡುತ್ತಿದ್ದರು , ಉದ್ಯೋಗದ ಬದುಕಿನ ಜೊತೆಗೆ ಉದ್ವೇಗದ ಬದುಕಿಗೆ ಬೇಕೇ ಬೇಕು ಸಂಸ್ಕಾರೋತ್ಸವ , ಕನ್ಯಾ ಸಂಸ್ಕಾರ ಉಪನಯನ ಸಂಸ್ಕಾರದಿಂದ ಉದ್ವೇಗ ಬರುವುದಿಲ್ಲ.ಮನಸ್ಸಿನ ಏಕಾಗ್ರತೆಗೆ ಈ ಎರಡು ಸಂಸ್ಕಾರಗಳೇ ಅಡಿಪಾಯಗಳು. ಬದ್ಧತೆಯ ಮೂಲಕ ಭದ್ರತೆ ಕೊಡುವುದೇ ವಿವಾಹ ಸಂಸ್ಕಾರ , ಹೀಗೆ ವಿವಿಧ ಸಂಸ್ಕಾರಗಳನ್ನು ಯಾಕೆ ಉಳಿಸಿಕೊಳ್ಳಬೇಕು ಎಂಬ ಕುರಿತು ಉತ್ತಮ 16 ಸಂಸ್ಕಾರಗಳನ್ನು ವಿವರಿಸಿದರು.
ಹೋದ ಜೀವಗಳು ಮರಳಿ ಬರಬೇಕಾದರೆ ಸರಿಯಾದಸಂಸ್ಕಾರ ಬೇಕೇಬೇಕು ಸಂಸ್ಕಾರ ಗಳಿಗೆ ಮಹತ್ವವಿದೆ.ಹುಟ್ಟುವ ಮೊದಲೇ ಆಗುವ ಸಂಸ್ಕಾರಗಳು ಆಗ ಇದ್ದವು. ಸಂಸ್ಕಾರಕ್ಕಿರುವ ಮಹತ್ವ ತುಂಬಾ ಇದೆ ಸಂಸ್ಕಾರಕ್ಕೊಂದು ಮಿತಿ ಇದೆ. ಹಾಗಾಗಿ ಎಲ್ಲರಿಗೂ ಒಳ್ಳೆಯ ಸಂಸ್ಕಾರ ಇರಲಿ , ಆದರೆ ರಕ್ತಗತವಾಗಿ ಬಂದ ಗುಣ ಬದಲಾಗೋದಿಲ್ಲ. ಜನಿವಾರ ಕೊಯ್ದರೂ ಸಂಸ್ಕಾರ ಹಾಳು ಮಾಡಲು ಸಾಧ್ಯವಿಲ್ಲ. ಧರ್ಮಾಚರಣೆ ಕಾನೂನುಅಡ್ಡ ಬರಬಾರದು ಎಲ್ಲರಿಗೂ ಸಮಾಜವನ್ನು ಸಂಸ್ಕಾರವಂತವಾಗಿಟ್ಟು ಕೊಳ್ಳಲು ಇಂಥ ಕಾರ್ಯಕ್ರಮಗಳು ಬೇಕು.ಎಂದು ಇದರೊಂದಿಗೆ 3 * ಸ * ಕಾರಗಳ ಅವಶ್ಯಕತೆಯನ್ನು ವಿವರಿಸಿದರು.
ಸಂಸ್ಕಾರ , ಸಂಖ್ಯೆ , ಸಂಘಟನೆ ಕುರಿತು ಉತ್ತಮ ಮಾಹಿತಿ ನೀಡುತ್ತಾ ಯಲ್ಲಾಪುರ ತಾಲೂಕಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಅಖಿಲ ಹವ್ಯಕ ಮಹಾ ಸಭೆಯ ಅಧ್ಯಕ್ಷರು ಆದ ಡಾಕ್ಟರ್ ಗಿರಿಧರ್ ಕಜೆ ಅವರು ಈ ಸಂದರ್ಭದಲ್ಲಿ ಮಾತನಾಡಿ ಹವ್ಯಕ ಸಂಸ್ಕಾರೋತ್ಸವ ಒಂದು ಹಬ್ಬ
ಹವ್ಯಕ ಸಮಾಜದ ಎಲ್ಲರೂ ಸಂಪೂರ್ಣ ಸಾಕ್ಷರರು ತುಂಬ ಸ್ವಾಭಿಮಾನಿಗಳು , ತುಂಬಾ ವಿದ್ಯಾವಂತರು ಕೂಡ ಎಂದು ಹೇಳಿದರು.
ಯಾವ ಕ್ಷೇತ್ರದಲ್ಲಿಯೂ ಹವ್ಯಕರು ಸದಾ ಮುಂದೆ , ಕದಂಬ ವಂಶದ ರಾಜ ನಮ್ಮವರನ್ನು ಬನವಾಸಿಗೆ ಕರೆ ತಂದರು. ಲೋಕ ಕಲ್ಯಾಣಕ್ಕೆ ಯಜ್ಞ ಮಾಡಲಿ ಎಂದು. ಹಾಗಾಗಿ ನಮ್ಮ ಸಮುದಾಯಕ್ಕೆ ಹವ್ಯಕರು ಎಂದರು.
ಗುರುಕುಲಗಳ ಮೂಲಕ ವಿದ್ವತ್ತನ್ನು ಮುಂದಿನ ಪೀಳಿಗೆಗೆ ತಲುಪಿಸಲಾಗುತ್ತಿದೆ. ಹವ್ಯಕರು ಮೂಲ ವೃತ್ತಿ ಬಿಡದೇ ಮುಂದು ವರಿದಿದ್ದಾರೆ. 1943 ರಲ್ಲಿಯೇ ನಮ್ಮ ಸಮುದಾಯದ ಸಂಘಟನೆ ಆಗಿದೆ. ಹವ್ಯಕರು ಇರುವ ಪ್ರತಿ ತಾಲೂಕಿನಲ್ಲಿ ಮಹಿಳಾ ವೇದಿಕೆ ಮಾಡಲಾಗುತ್ತಿದೆ. ಅದರಂತೆ 3 ತಾಲೂಕಿಗೆ ಮಹಿಳಾ ವೇದಿಕೆ ಮಾಡಲಾಗಿದೆ.
1954 ರಿಂದಲೇ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರಾಗಿದ್ದರು. ಚಿನ್ನ ಕೂಡ ಹೊಳಪು ಬರಬೇಕಾದರೆ ಸಂಸ್ಕಾರ ಅಗತ್ಯ ಅದರಂತೆ ನಾವು ಕೂಡ , ನಮಗೂ ಸಂಸ್ಕಾರೋತ್ಸವ ಅಗತ್ಯತೆ ಇದೆ. ಪ್ರತಿಬಿಂಬ ಸುಂದರವಾಗಿ ಮೂಡಿ ಬಂತು. ಈ ವರ್ಷ 12 ಸ್ಥಳಗಳಲ್ಲಿ ಮುಂಬೈ , ಗೋವಾ ಸೇರಿ ನಡೆಯುತ್ತಿದೆ. ವಿಜಯೀ ಭವ ಕೂಡ ಒಂದು ಎಂದು ಹೇಳಿದರು ಇದು ಸಂಸ್ಕಾರದ ಉತ್ಸವ ಎಲ್ಲರೂ ಇದರಿಂದ ಸ್ಪೂರ್ತಿ ಪಡೆಯಲಿ ಎಂಬ ಉದ್ದೇಶ ಇದಾಗಿದೆ. ಈ ವರ್ಷ ಕೂಡ ಹೊಸ ಕಾರ್ಯಕ್ರಮ ಶ್ರೀ ಶಂಕರೋತ್ಸವ ನಡೆಸಲಿದ್ದೇವೆ ಶ್ರೀ ಶಂಕರಾಚಾರ್ಯರ ಸಾಹಸ ಗೀತೆ, ಇದಾಗಿದೆ. ನಮ್ಮ ಸರಕಾರ ಹವ್ಯಕ ಭಾಷ ಅಕಾಡೆಮಿ ನಿರ್ಮಿಸಿದ್ದು ನಮಗೆ ಹೆಮ್ಮೆಯ ವಿಚಾರವಾಗಿದೆ. ಹವ್ಯಕ ಭಾಷೆ ಆಡುವವರು ಹವ್ಯಕರು ಮಾತ್ರಇದರಲ್ಲಿ 7 ಭಾಷೆ ವಿಧವಿದ್ದು ಸಾಹಿತ್ಯ ಸಮೃದ್ಧಿ ಇದೆ. ಹಾಗಾಗಿ ಹವಿಗನ್ನಡ ಭಾಷೆ ದಿನವನ್ನು ಆಚರಿಸೋಣ ಎಂದರು.ನಮ್ಮ ಆಹಾರ ಕಲೆ ಭಾಷೆ ಪರಂಪರೆ ಶ್ರೇಷ್ಠ ಗುರುಪೀಠ ಕೂಡ ನಮ್ಮದಿದೆ ಇದು ನಮ್ಮ ಹೆಮ್ಮೆ ಎಂದರು ಅನೇಕ ಗಣ್ಯರು ಈ ಸಂದರ್ಭ ದಲ್ಲಿ ಮಾತನಾಡಿ ದರು, ಸ್ಪರ್ಧೆ ಯಲ್ಲಿ ಭಾಗವಹಿಸಿದವರಿಗೆ ಶ್ರೀ ಗಳಿಂದ ಬಹುಮಾನ ವಿತರಣೆ ನಡೆದು ನಿರಂತರ ಕಾರ್ಯಕ್ರಮ ಗಳು ರಾತ್ರಿಯ ವರೆಗೂ ನಡೆಯುತ್ತಿವೆ.
