ಸುದ್ದಿ ಕನ್ನಡ ವಾರ್ತೆ

ಶಿರಸಿಯಲ್ಲಿ ನಗರದ ಟಿ ಎಸ್ ಎಸ್ ಆಸ್ಪತ್ರೆಯಲ್ಲಿ ಅರ್ಧ ಕೆಜಿ ತೂಕದ 9 x 9 ಸೆಂಟಿಮೀಟರ್ ನಷ್ಟು ದೊಡ್ಡದಾದ, ದೊಡ್ಡ ಆಲೂಗಡ್ಡೆ ಆಕಾರದ ಮೂತ್ರಚೀಲದ ಕಲ್ಲನ್ನು ಮೂತ್ರಾಂಗ ತಜ್ಞ ಡಾ. ಗಜಾನನ ಭಟ್ಟ ಅವರ ನೇತೃತ್ವದ ತಂಡ ಶಸ್ತ್ರಚಿಕಿತ್ಸೆಯ ಮೂಲಕ
ಇಡಿಯಾಗಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ.
ಇದರ ಜೊತೆಗೆ ಸರಿ ಸುಮಾರು 250 ಸಿಸಿ ಗಾತ್ರದ ಪ್ರಾಸ್ಟೇಟ್ ಗ್ರಂಥಿಯೂ
ಇದ್ದುದರಿಂದ ಈ ಗ್ರಂಥಿಗೆ ಹಾನಿಯಾಗುವುದನ್ನು ತಪ್ಪಿಸಲು ಮೂತ್ರಚೀಲದ ಮೇಲಿನ ಗಾಯವನ್ನು ಹಿಗ್ಗಿಸದೇ ತೆಗೆಯಲು,
ಸಾಮಾನ್ಯವಾಗಿ ಸಿಸೇರಿಯನ್ ಹೆರಿಗೆಯಲ್ಲಿ ಬಳಸುವ ತಂತ್ರಜ್ಞಾನ ಹಾಗೂ ಉಪಕರಣಗಳನ್ನು ಬಳಸಲಾಗಿದೆ. ಎಂದು ತಿಳಿದು ಬಂದಿದೆ.ಇದು ಕರ್ನಾಟಕ ರಾಜ್ಯದಲ್ಲಿ ಇದುವರೆಗೆ ಇಡಿಯಾಗಿ ತೆಗೆಯಲ್ಪಟ್ಟ ಮೂರನೇ ಅತಿದೊಡ್ಡ ಮೂತ್ರಚೀಲದ ಕಲ್ಲಾಗಿದ್ದು, ಉತ್ತರ ಕನ್ನಡದಲ್ಲಿ ಇದುವರೆಗೆ ದಾಖಲಾದ ಅತಿದೊಡ್ಡ ಮೂತ್ರಚೀಲದ ಕಲ್ಲು ಎಂದು ದಾಖಲೆಯಾಗಿದೆ.

ರೋಗಿಯು ಶಸ್ತ್ರಚಿಕಿತ್ಸೆಯಿಂದ ಚೇತರಿಸಿ ಕೊಳ್ಳುತ್ತಿದ್ದಾರೆ.
ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ ಡಾ ಗಜಾನನ ಭಟ್ಟ ಹಾಗೂ ತಂಡದ ಸದಸ್ಯರಾದ ಡಾ. ವಿಜಯಕುಮಾರ, ಡಾ. ವಿನಾಯಕ ತೆಂಬದಮನಿ, ಶುಶ್ರೂಷಕಿ ಆರತಿ ಇವರ ಜೊತೆಗೆ ಶಸ್ತ್ರಚಿಕಿತ್ಸಾ ಸಹಾಯಕ ಸಿಬ್ಬಂದಿಗಳನ್ನು ಆಸ್ಪತ್ರೆಯ ಆಡಳಿತ ಮಂಡಳಿ ಅಭಿನಂದಿಸಿದೆ.