ಸುದ್ದಿ ಕನ್ನಡ ವಾರ್ತೆ
ಮಾನ್ಯ ಕುಲಪತಿಗಳು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ರಾಷ್ಟ್ರೀಯ ಸೇವಾ ಯೋಜನಾ ಕೋಶ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜೋಯಿಡ, ಮತ್ತು ಶ್ರೀ ಉಳವಿ ಚನ್ನಬಸವೇಶ್ವರ ಟ್ರಸ್ಟ್, ಉಳವಿ ಇವರ ಸಹಯೋಗದಲ್ಲಿ
ಐತಿಹಾಸಿಕ ಸ್ಮಾರಕಗಳು ಹಾಗೂ ಪಾರಂಪರಿಕ ಸ್ಥಳಗಳ ಸಂರಕ್ಷಣೆ ಹಾಗೂ, ಸ್ವಚ್ಚತೆಗಾಗಿ ವಿಶ್ವವಿದ್ಯಾಲಯ ಮಟ್ಟದ
ಎನ್.ಎಸ್.ಎಸ್. ನಾಯಕತ್ವ ತರಬೇತಿ ಶಿಬಿರ ಉಳವಿಯಲ್ಲಿ ಹಮ್ಮಿಕೊಂಡಿದ್ದು, ಈ ಶಿಬಿರದ ಉದ್ಘಾಟಕನೇಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಎ. ಎಂ. ಖಾನ್ ಅವರು ಉದ್ಘಾಟಿಸಿ, ಮಾತನಾಡಿ ಅತ್ಯುತ್ತಮ ನಾಯಕನಾಗಲು ಮೊದಲು ತಂದೆ ತಾಯಿಯರನ್ನ ಚನ್ನಾಗಿ ನೋಡಿಕೊಳ್ಳಬೇಕು, ನಂತರ ಹಿರಿಯರಿಗೆ ಗೌರವ ಕೊಡಬೇಕು ಅಂದಾಗ ಮಾತ್ರ ಅತ್ಯುತ್ತಮ ನಾಯಕನಾಗಲು ಸಾಧ್ಯ. ಈ ಶಿಬಿರ ಮಾದರಿಯಾಗಲಿ ಸುಕ್ಷೇತ್ರದಲ್ಲಿ ನಿಮ್ಮ ಅಮೂಲ್ಯವಾದ ಸಮಯವನ್ನ ಸೇವೆಯ ಮುಕಾಂತರ ಸದುಪಯೋಗ ಪಡಿಸಿಕೊಳ್ಳಿ ಎಂದರು , ವಿಶ್ವವಿದ್ಯಾಲಯದ ಎನ್. ಎಸ್. ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಎಂ. ಬಿ. ದಳಪತಿ ಪ್ರಾಸ್ತಾವಿಕ ನುಡಿಗಳನ್ನಾಡಿ , ಈ ನಾಯಕತ್ವ ಶಿಬಿರದಲ್ಲಿ ಮೂರು ಜಿಲ್ಲೆಗಳಾದ ಧಾರವಾಡ, ಗದಗ, ಕಾರವಾರ, ಬಾಗದಿಂದ 200 ಎನ್. ಎಸ್. ಎಸ್. ಸ್ವಯಂ ಸೇವಕರು, 10 ಕಾರ್ಯಕ್ರಮ ಅಧಿಕಾರಿಗಳು ಬಂದಿದ್ದಾರೆ ಮತ್ತು 7 ದಿನಗಳ ಕಾಲ 15 ರಿಂದ 21 ರ ವರೆಗೆ ಈ ಶಿಬಿರ ನಡೆಯುತ್ತದೆ, ಇಲ್ಲಿ ಸೇವಾ ನಿರತ ಕಾರ್ಯಗಳು ಜರಗುತ್ತವೆ ಈ ಶಿಬಿರದ ಮುಖ್ಯ ಉದ್ದೇಶ ” ಪ್ಲಾಸ್ಟಿಕ್ ಮುಕ್ತ ಉಳವಿ “, ಸ್ಮಾರಕಗಳ ಸಂರಕ್ಷಣೆ, ಜನರಿಗೆ ಸ್ವಚ್ಛತೆ ಅರಿವು ಮೂಡಿಸುವುದು,ಪ್ಲಾಸ್ಟಿಕ್ ನಿಂದ ಆಗುವ ದುಷ್ಪರಿಣಾದ ಅರಿವು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನ ಬೆಳಸುವುದು, ಬಾವೈಕ್ಯತೆಯನ್ನು ಬೆಳಸುವುದು, ಉದ್ದೇಶವಾಗಿದೆ ಎಂದು ನುಡಿದರು ನಂತರ ದಿವ್ಯ ಸಾನಿಧ್ಯ ವಹಿಸಿಕೊಂಡಂತಹ . ಎಸ್. ಎಮ್. ಕಲ್ಮಠ ಶಾಸ್ತ್ರೀ ಉಳವಿ ಮಾತನಾಡಿ ಉಳವಿಗೆ ನೀವು ಬಂದು ಉಳಿದಿದ್ದೀರಿ ಇಲ್ಲಿ ಉಳಿದು ಪ್ರತಿಯೊಂದು ಸ್ಥಳಗಳಿಗೆ ಭೇಟಿ ನಿಡಿ ಇತಿಹಾಸವನ್ನು ತಿಳಿದುಕೊಳ್ಳಿರಿ, ಇದು ಅತ್ಯಂತ ಪವಿತ್ರ ಕ್ಷೇತ್ರ ನಿಮಗೆ ಚನ್ನಬಸವಣ್ಣನವರ ಆಶೀರ್ವಾದ ಸದಾ ಇರಲಿ ಎಂದರು.
ಮುಖ್ಯ ಅತಿಥಿಗಳ ನುಡಿಗಳನ್ನ ನುಡಿದಂತಹ, ಅಧ್ಯಕ್ಷರು, ಶ್ರೀ ಉಳವಿ ಚನ್ನಬಸವೇಶ್ವರ ಟ್ರಸ್ಟ ನ ಸಂಜಯ ಕಿತ್ತೂರ್ ರವರು , ಎನ್. ಎಸ್. ಎಸ್ ಅತ್ಯಂತ ಶಿಸ್ತಿನ ಸಂಘಟನೆ, ನೀವೆಲ್ಲ ಈ ಉಳವಿಯ ಬಗ್ಗೆ ತಿಳಿದುಕೊಳ್ಳಿ ಎಂದು ಹಾರೈಸಿದರು.
ಸಭೆಯ ಅಧ್ಯಕ್ಷ ಗೋಪಾಲಭಟ್ಟ ಶಿವಪುರ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸಂದೇಶವನ್ನ ನೀಡುತ್ತಾ , ಕಾಡಿದ್ದರೆ ನಾಡು ನಾಡಿದ್ದರೆ ನಾವು ಎಂದು ಈ ಕ್ಷೇತ್ರದ ಮಹಿಮೆ ಅಪಾರ ನಿಮ್ಮ ಸೇವೆ ಅತ್ಯದ್ಭುತವಾಗಲಿ ಎಂದು ನುಡಿದರು,
ಅಸ್ಲಮ ಮುಗದ,ಕಾರ್ಯದರ್ಶಿಗಳು ಸೇವಾ ಸಹಕಾರಿ ಬ್ಯಾಂಕ್ ಶ್ರೀಮತಿ ಮಂಜುಳಾ ವಸ್ತ್ರದ ಸದಸ್ಯರು, ಶ್ರೀ ಚನ್ನಬಸವೇಶ್ವರ ಪ್ರೌಢಶಾಲೆ ಪ್ರ. ದ. ಕಾಲೇಜು ಜೋಯಿಡಾ ದ ಪ್ರಾಚಾರ್ಯರಾದ, ಡಾ. ಅಂಜಲಿ ರಾಣೆ, ಶಿಬಿರದ ಶಿಬಿರಾಧಿಕಾರಿ ಮಹಮ್ಮದ ವಾಯೀಜ್ , ರಾಜ್ಯ ಎನ್. ಎಸ್. ಎಸ್. ಪ್ರಶಸ್ತಿ ಪುರಸ್ಕೃತ ಶಿವಯೋಗಿ ಹಾವೇರಿ ರವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ.ಕಸ್ತೂರಿ ದಳವಾಯಿ, ಡಾ. ನೇತ್ರಾವತಿ ಗಬ್ಬುರ್ ಡಾ. ಪುಂಡಲೀಕ್ ಮಾದರ ನಡೆಸಿಕೊಟ್ಟರು.
