ಸುದ್ದಿ ಕನ್ನಡ ವಾರ್ತೆ

ಹಳಿಯಾಳ:ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮಂಗಳವಾಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಭಾನುವಾರ ಸುರಿದ ಭಾರೀ ಗಾಳಿ ಮಳೆ ಮತ್ತು ಸಿಡಿಲು ಬಡಿದು ಮೂರು ಜಾನುವಾರುಗಳು ಮೃತಪಟ್ಟಿವೆ.ಹಾಗೂ ಮಂಗಳವಾಡ ಪ್ರೌಢಶಾಲೆಯ ಮೇಲ್ಛಾವಣಿ ಹಾರಿ ಹೋಗಿ ಹಾನಿ ಸಂಭವಿಸಿದ ಘಟನೆ ನಡೆದಿದೆ.

ಘಟನೆಯ ವಿವರಗಳು.
ಪ್ರಕೃತಿ ವಿಕೋಪ: ಹಳಿಯಾಳ ತಾಲೂಕಿನಲ್ಲಿ ದಿಢೀರನೆ ಭಾರೀ ಗಾಳಿ ಹಾಗೂ ಗುಡುಗು ಸಹಿತ ಮಳೆ ಸಂಭವಿಸಿದೆ.
ಸಿಡಿಲು ಬಡಿತ : ಮಳೆಯ ಸಂದರ್ಭದಲ್ಲಿ ತೀವ್ರವಾದ ಸಿಡಿಲು ಬಡಿದ ಪರಿಣಾಮ ರೋಮನ್ ಬಾವತಿಸ್ ದಾಲ್ಮೆತ ಅವರ ಎರಡು ಎತ್ತುಗಳು ಹಾಗೂ ಒಂದು ಆಕಳು ಒಟ್ಟು ಮೂರು ಜಾನುವಾರುಗಳು ಸ್ಥಳದಲ್ಲೇ ಸಾವನ್ನಪ್ಪಿವೆ.ಕುಟುಂಬದ ಆರ್ಥಿಕ ನಿರ್ವಹಣೆಯ ಆಧಾರವಾಗಿದ್ದ ಜಾನುವಾರುಗಳ ಸಾವಿನಿಂದ ಕುಟುಂಬವು ತೀವ್ರ ಸಂಕಷ್ಟಕ್ಕೆ ಒಳಗಾಗಿದೆ.

ಸಾರ್ವಜನಿಕ ನಷ್ಟ: ಈ ಮಳೆ ಮತ್ತು ಗಾಳಿಯ ಅವಾಂತರದಿಂದಾಗಿ ಸ್ಥಳೀಯ ರೈತರಿಗೆ ಮತ್ತು ಜಾನುವಾರು ಮಾಲೀಕರಿಗೆ ದೊಡ್ಡ ಪ್ರಮಾಣದ ಆರ್ಥಿಕ ನಷ್ಟ ಸಂಭವಿಸಿದ್ದು ಸೂಕ್ತ ಪರಿಹಾರ ನೀಡುವಂತೆ ಆಡಳಿತ ವ್ಯವಸ್ಥೆಗೆ ಮನವಿ ಮಾಡಿದ್ದಾರೆ.