ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ತಾಲೂಕಿನ ಕೇಂದ್ರ ಜೋಯಿಡಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕುಡಿಯಲು ನೀರಿಲ್ಲದೇ ಜನರು ಒದ್ದಾಡುವಂತಾಗಿದೆ, ಗ್ರಾಮಸ್ತರು ನೀರು ಬಿಡುವವನನ್ನು ಕೇಳಿದರೆ ವಿವಿಧ ಕಾರಣ ಹೇಳುತ್ತಾರೆ, ಗ್ರಾಮ ಪಂಚಾಯತ ನಮ್ಮಿಂದ ನಿಗದಿತವಾಗಿ ಕರ ಪಡೆದು ಕೊಂಡು ಈ ರೀತಿಯ ಅವ್ಯವಸ್ಥೆ ಮಾಡಿದರೆ ನಮ್ಮ ಗತಿಯೇನು, ಇದು ನಿರಂತರ ವಾಗಿ ನಡೆದು ಕೊಂಡು ಬರುತ್ತಿದೆ ಯಾರೂ ಗ್ರಾಮ ಪಂಚಾಯತ ಕ್ಕೆ ಈ ಬಗ್ಗೆ ಎಚ್ಚರಿಕೆ ಮುಟ್ಟಿಸುವವರಿಲ್ಲ,
ಅವರ ಮರ್ಜಿ ಕಾಯುತ್ತಾರೆ, ಗ್ರಾಮ ಪಂಚಾಯತ ಮಾಜಿ ಜನ ಪ್ರತಿನಿದಿಗಳು ಮುಂದೆ ಮತ್ತೆ ತಾವು ಆರಿಸಿ ಬರಬೇಕು ಎಂಬ ಕಾರಣಕ್ಕೆ ಮಾತನ್ನಾಡುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಎರಡು ದಿನಗಳಿಗೊಮ್ಮೆ ನೀರು ಬಿಡುತ್ತಿದ್ದವರು, ಮೂರನೇ ದಿನ ಕಾಟಾಚಾರಕ್ಕೆ ನೀರು ಬಿಟ್ಟು ಕೈ ತೊಳೆದು ಕೊಳ್ಳುತ್ತಾರೆ, ಸಂಬಂಧ ಪಟ್ಟ ಗ್ರಾಮ ಪಂಚಾಯತ ಹಿರಿಯ ಅಧಿಕಾರಿಗಳಿಗೆ ಹೇಳಿದರೆ ಕೆಳಗಿನವರಿಗೆ ಹೇಳುತ್ತಾರೆ, ಅವರು ಬಂದು ಜನರನ್ನೇ ದಬಾಯಿಸುವ ಮಟ್ಟಕ್ಕೆ ಹೋಗಿದೆ, ನೀರು ಬಿಡುವವನೆ ಯಜಮಾನ ನಾಗಿದ್ದು ಇವನ ಮರ್ಜಿ ಕಾಯುವುದೇ ಕಷ್ಟ ವಾಗಿದೆ ಎಂದು ಜನತೆ ದೂರಿದ್ದಾರೆ. ನಾವು ಕೇಳುವುದು ಇಷ್ಟೇ, ಕೊಡುವ ನೀರು ನಿಗದಿತವಾಗಿ ಸಾಕಷ್ಟು ಪ್ರಮಾಣ ದಲ್ಲಿ ಕೊಡಲಿ, ಕಾಟಾಚಾರಕ್ಕೆ ನೀರು ಬಿಟ್ಟು, ನೀರು ಕೊಟ್ಟಿದ್ದೇವೆ ಎಂದರೆ ಹೇಗೆ?? ಈ ಬಿರು ಬೇಸಿಗೆ ಯಲ್ಲಿ ನೀರಿಲ್ಲದೇ ಬದುಕುವುದೇ ಕಷ್ಟ ಹೀಗಿದ್ದಾಗ, ಸರಿಯಾಗಿ ನೀರು ಬಿಡಲಿ, ಪಂಪು ಸರಿ ಇಲ್ಲ, ಸ್ಟಾರ್ಟೆರ್ ಸರಿ ಇಲ್ಲ, ಕರೆಂಟ್ ನಿಲ್ಲುತ್ತಿಲ್ಲ, ನಾಳೆ ನೀರು ಬಿಡುತ್ತೇವೆ ಎಂಬ ಸಾಬೂಬು ಪ್ರತಿದಿನವೂ ಕೇಳಿ ಕೇಳಿ ಸಾಕಾಗಿದೆ, ಉಳ್ಳವರು ಸ್ವಂತ ಬಾವಿ ಮಾಡಿಕೊಂಡಿದ್ದಾರೆ, ನಾವೇನು ಮಾಡುವುದು ಬಡವರು, ಎಂದು ಜನತೆ ದಿನವೂ ನೀರಿಗಾಗಿ ಕಾಯುತ್ತಿದ್ದಾರೆ. ತಾಲೂಕಿನ ಹೊರಗೆ ಕಾಳಿ ನದಿಯಿಂದ ನೀರು ಹೋಗುತ್ತಿದೆ ಆದರೆ ಜೋಯಿಡಾ ಮತ್ತು ರಾಮನಗರ ಗಳಿಗೆ ನೀರಿನ ಶಾಪ ತಗುಲಿದಂತಿದೆ ಕಳೆದ ಮೂರು ವರ್ಷ ಗಳಿಂದ ಇಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಯೋಜನೆ ನೆನೆಗುದಿಗೆ ಬಿದ್ದಿದೆ, ಶಾಸಕರು, ತಾಲೂಕಾ ದಂಡಾಧಿಕಾರಿ ಗಳು, ನೀರಾವರಿ ಇಲಾಖೆ ಅಧಿಕಾರಿಗಳು, ತಾಲೂಕು ಪಂಚಾಯತ ಅಧಿಕಾರಿಗಳು ಯಾರೂ ಇದನ್ನು ಕೇಳುತ್ತಿಲ್ಲ, ವಿವಿಧ ಪಕ್ಷದ ಜನರು ಕೇಳುತ್ತಿಲ್ಲ, ಇವರಿಗೆ ಯಾಕೆ ಈ ಯೋಜನೆ ಬೇಡವಾಗಿದೆ ಎಂದು ಜನತೆ, ಮಾಧ್ಯಮ ದವರಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ, ಇದಕ್ಕೆಲ್ಲ ಯಾರು ಉತ್ತರ ನೀಡಬೇಕು ಎಂದು ಸಂಬಂಧ ಪಟ್ಟವರು ಗಮನಿಸಿ ಜನತೆಗೆ ಪ್ರತಿದಿನವೂ ನೀರು ಸಿಗುವಂತೆ ಮಾಡಬೇಕು, ಸಾಧ್ಯ ವಿಲ್ಲ ಎಂದಾದರೆ ಅಧಿಕಾರಿಗಳು, ಹಲವಾರು ವರ್ಷ ಗಳಿಂದ ಇಲ್ಲೆ ಬೀಡು ಬಿಟ್ಟು ಬೇರು ಬರುವ ಮೊದಲೇ ಜಾಗ ಕಾಲಿ ಮಾಡಲಿ ಎಂದು ಸಾರ್ವಜನಿಕರು ಒತ್ತಾಯಿಸಿ ಕೂಡಲೇ ಸಮರ್ಪಕ ವಾಗಿ ನೀರು ಬಿಡಲು ಕೇಳಿ ಕೊಂಡಿದ್ದಾರೆ.ನೀರು ನಿರಂತರ ವಾಗಿರಲು ಇದಕ್ಕೆ ಬೇಕಾದ ವ್ಯವಸ್ಥೆಯನ್ನು ಗ್ರಾಮ ಪಂಚಾಯತ ಮಾಡಿ ಕೊಳ್ಳಲಿ, ಸಬೂಬು. ಬೇಡ ಎಂಬ ಆಗ್ರಹ ಜನತೆ ನೀಡಿದ್ದಾರೆ.
