Banner Ad

ಸುದ್ದಿ ಕನ್ನಡ ವಾರ್ತೆ
​​ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಇಂದು ಮಧ್ಯಾಹ್ನ 3:00 ಗಂಟೆಗೆ ಅಧಿಕೃತವಾಗಿ ಪ್ರಕಟಿಸಲಿದೆ. ಪರೀಕ್ಷೆಗೆ ಹಾಜರಾದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಕ್ಷಣಗಳು ಹತ್ತಿರವಾಗಿದ್ದು, ಫಲಿತಾಂಶ ಪಡೆಯಲು ಮಂಡಳಿಯು ಹಲವು ಮಾರ್ಗಗಳನ್ನು ಕಲ್ಪಿಸಿದೆ.

​ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಆನ್‌ಲೈನ್ ಮೂಲಕ ಸುಲಭವಾಗಿ ವೀಕ್ಷಿಸಬಹುದು. ಇಲಾಖೆಯ ಅಧಿಕೃತ ವೆಬ್‌ಸೈಟ್: https://karresults.nic.in ಗೆ ಭೇಟಿ ನೀಡಿ ಫಲಿತಾಂಶ ಪರಿಶೀಲಿಸಬಹುದು. ಅಲ್ಲದೆ ‘Karnataka-One’ ಮೊಬೈಲ್ ಆಪ್‌ನಲ್ಲೂ ಫಲಿತಾಂಶ ಲಭ್ಯವಿರಲಿದೆ. ಜೊತೆಗೆ ವಿದ್ಯಾರ್ಥಿಗಳು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಮಂಡಳಿಯಿಂದ ನೇರವಾಗಿ ವಾಟ್ಸಾಪ್ ಅಥವಾ ಎಸ್ಎಂಎಸ್ ಸಂದೇಶದ ಮೂಲಕವೂ ಫಲಿತಾಂಶದ ಮಾಹಿತಿ ಪಡೆಯಬಹುದಾಗಿದೆ.

Banner Ad

​ಇನ್ನು ಈ ಬಾರಿ ವಿಶೇಷವಾಗಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಡಿಜಿಲಾಕರ್ ಮೂಲಕವೂ ಲಭ್ಯಗೊಳಿಸಲಾಗುತ್ತಿದೆ. ಇಂದು ಮಧ್ಯಾಹ್ನ 3:00 ಗಂಟೆಯಿಂದಲೇ ವಿದ್ಯಾರ್ಥಿಗಳು https://www.digilocker.gov.in ವೆಬ್‌ಸೈಟ್ ಬಳಸಿಕೊಂಡು ತಮ್ಮ ಅಂಕಪಟ್ಟಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಡಿಜಿಲಾಕರ್ ಮೂಲಕ ಅಂಕಪಟ್ಟಿ ಪಡೆಯುವ ವಿಧಾನವನ್ನು ತಿಳಿಯಲು ಮಂಡಳಿಯು ಬಿಡುಗಡೆ ಮಾಡಿರುವ ವಿಡಿಯೋ ಲಿಂಕ್: https://www.google.com/search?q=https://tinyurl.com/mw84wmh9 ಅನ್ನು ಬಳಸಿಕೊಳ್ಳಬಹುದು.

​ಫಲಿತಾಂಶ ಪ್ರಕಟವಾದ ತಕ್ಷಣವೇ ಮಧ್ಯಾಹ್ನ 3:00 ಗಂಟೆಗೆ ಸಂಬಂಧಪಟ್ಟ ಕಾಲೇಜುಗಳಿಗೆ ಫಲಿತಾಂಶ ಪಟ್ಟಿಯನ್ನು ಮಂಡಳಿಯು ಕಳುಹಿಸಿದೆ. ವಿದ್ಯಾರ್ಥಿಗಳು ತಮ್ಮ ಕಾಲೇಜುಗಳಿಗೂ ಭೇಟಿ ನೀಡಿ ಫಲಿತಾಂಶದ ವಿವರಗಳನ್ನು ಪಡೆಯಬಹುದಾಗಿದ್ದು, ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಶುಭಾಶಯಗಳನ್ನು ಕೋರಿದೆ.

Banner Ad