Banner Ad

ಸುದ್ದಿ ಕನ್ನಡ ವಾರ್ತೆ

ಹಳಿಯಾಳದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (APMC) ಶಾಖೆ, ಉಪ ಪ್ರಾಂಗಣ (SUB YARD) ಜೋಯಡಾದಲ್ಲಿ ರವಿವಾರ ಪ್ರಾರಂಭ ವಾಗುತ್ತಿದೆ. ಈ ವರೆಗೆ ಇಲ್ಲಿಯ ರೈತರಿಗೆ ತಮ್ಮ ಕೃಷಿ ಉತ್ಪನ್ನ ಗಳ ಮಾರಾಟಕ್ಕೆ ಒಂದು ಸೂಕ್ತ ವೇದಿಕೆ ಇರಲಿಲ್ಲ. ನೆರೆಯ ತಾಲೂಕುಗಳಾದ ಹಳಿಯಾಳ ಹಾಗು ಯಲ್ಲಾಪುರ ಮೇಲೆ ಅವಲಂಬಿಸಿ ಇರಬೇಕಾದ ಪರಿಸ್ಥಿತಿ ಇತ್ತು. ಸ್ಥಳೀಯ ವಾಗಿ ಒಂದು ಮಾರುಕಟ್ಟೆ ಆಗಬೇಕು ಎನ್ನುವ ಒಂದು ಬಹಳ ವರ್ಷಗಳ ಕನಸಾಗಿತ್ತು. ಈ ಸಂಬಂಧ ನಮ್ಮ ಸಂಸ್ಥೆ ನೇತೃತ್ವದಲ್ಲಿ ತಾಲ್ಲೂಕಿನ ರೈತರು, ವ್ಯಾಪಾರಸ್ಥರು , ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಶಾಸಕರಾದ ಆರ್ ವಿ ದೇಶಪಾಂಡೆ ರವರಲ್ಲಿ ಹಾಗು ಕೃಷಿ ಮಾರುಕಟ್ಟೆಗಳ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ನಮ್ಮ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಿ ಮಾನ್ಯ ಶಾಸಕರು ಸಬ್ ಯಾರ್ಡ್ ಮಂಜೂರು ಮಾಡಿರುತ್ತಾರೆ. ಇದೊಂದು ನಮ್ಮ ತಾಲೂಕಿನ ಜನರಿಗೆ ಸುವರ್ಣ ಅವಕಾಶ ಹಾಗು ಹೆಮ್ಮೆಯ ಸಂಗತಿ. ಈಗ ನಮ್ಮ ತಾಲ್ಲೂಕಿನ ಕೃಷಿ ಉತ್ಪನ್ನ ಗಳಾದ ಅಡಿಕೆ, ತೆಂಗು, ಕಾಳು ಮೆಣಸು, ಅರಿಸಿಣ, ಜೇನು, ಭತ್ತ ಮುಂತಾದವು ಗಳಿಗೆ ಹತ್ತಿರದ ಮಾರುಕಟ್ಟೆ ಲಭ್ಯ ವಾಗಿದ್ದು, ರೈತರ ಆದಾಯ ಹೆಚ್ಚಾಗಲಿದೆ. ಸದರಿ ಸಬ್ ಯಾರ್ಡಿನ ಸೇವೆ, ಇದೇ ಬರುವ ರವಿವಾರ ರಂದು ಅಡಿಕೆ ಹಾಗು ಕಾಳು ಮೆಣಸಿನ *ಮುಕ್ತ ಟೆಂಡರ್* ಮಾಡುವ ಮೂಲಕ ತೆರೆಯಲಿದ್ದೇವೆ. ರೈತರು ತಮ್ಮ ಉತ್ಪನ್ನ ಗಳನ್ನು ಟೆಂಡರ್ ಮೂಲಕ ಮಾರಾಟಕ್ಕೆ ತರಬೇಕು ಮತ್ತು ಉದ್ಘಾಟನಾ ಸಮಾರಂಭದಲ್ಲಿ ಎಲ್ಲಾ ಸಂಘಸಂಸ್ಥೆಗಳು, ವ್ಯಾಪಾರಸ್ಥರು, ಸಾರ್ವಜನಿಕರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿಸಲು ಸಹಕರಿಸಬೇಕಾಗಿ ವಿನಂತಿ.
ಶಾಸಕರು ಹಾಗು ಕರ್ನಾಟಕ ಸರಕಾರದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್ ವಿ ದೇಶಪಾಂಡೆಯವರು.ರವಿವಾರ ಸಬ್ ಯಾರ್ಡ ಉದ್ಘಾಟನೆ ಮಾಡುವರು
ರವಿ ರೇಡಕರ್, ಅಧ್ಯಕ್ಷರು ಗ್ರೀನ್ ಏಕರ್ಸ್
ಆರಗ್ಯಾನಿಕ ಸೌಹಾರ್ದ ಕ್ರೇಡಿಟ್ ಸಹಕಾರಿ ನಿ.ಇವರು ಅಧ್ಯಕ್ಷತೆ ವಹಿಸಲಿದ್ದಾರೆ
ರವಿವಾರ ರಂದು ಮುಂಜಾನೆ 10.30 ಗಂಟೆಗೆ
ಗ್ರೀನ ಏಕರ್ಸ್ ಸೊಸೈಟಿ, ಪ್ರಾಥಮಿಕ ಶಾಲೆ ಎದುರಿಗೆ, ಶಿವಾಜಿ ಸರ್ಕಲ್ ,ಜೋಯಡಾ.ಇಲ್ಲಿ ಕಾರ್ಯಕ್ರಮ ನಡೆಯಲಿದೆ
ಕೃಷ್ಣಾ ದೇಸಾಯಿ, ಉಪಾಧ್ಯಕ್ಷರು ಕೆಡಿಸಿಸಿ ಬ್ಯಾಂಕ್, ಸಿರಸಿ.ಶ್ರೀಮತಿ ಭಾರತಿ ಎನ್., ಕಾರ್ಯ ನಿರ್ವಾಹಣಾಧಿಕಾರಿ, ತಾಲುಕಾ ಪಂಚಾಯತ್,ಜೋಯಡಾ.ಬಸವರಾಜ್ ಜುಮನಾಳ, ಸಹಾಯಕ ನಿರ್ದೇಶಕರು, ಕೃಷಿ ಮಾರುಕಟ್ಟೆಗಳ ಇಲಾಖೆ, ಸಿರಸಿ.
ಶ್ರೀಮತಿ ಸುಮಿತ್ರಾ ಎಸ್ ಹಾವಣ್ಣನವರ, ಕಾರ್ಯದರ್ಶಿ, ಎಪಿಎಮ್ ಸಿ ಹಳಿಯಾಳ
ರವಿ ಹೆಗಡೆ, ಅಧ್ಯಕ್ಷರು, ಅಡಿಕೆ ವ್ಯಾಪಾರಸ್ಥರ ಸಂಘ, ಯಲ್ಲಾಪುರ ಉಪಸ್ಥಿತರಿರುವರು
ತಾಲೂಕಿನ ಎಲ್ಲಾ ಸೇವಾ ಸಹಕಾರಿ ಸಂಘಗಳ ಅಧ್ಯಕ್ಷರು , ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಸಂಘಸಂಸ್ಥೆಗಳು ಮತ್ತು ಸಾರ್ವಜನಿಕರು ಬಂದು ಲಾಭ ಪಡೆದು ಕೊಳ್ಳಲು ಕೇಳಿಕೊಳ್ಳಲಾಗಿದೆ.ಎಂದು ರವಿ ರೆಡ್ಕರ್ ಗ್ರೀನ್ ಏಕರ್ಸ್ ಸೊಸೈಟಿ ಅಧ್ಯಕ್ಷ ರು ಪ್ರಕಟಿಸಿದ್ದಾರೆ

Banner Ad
Banner Ad