Banner Ad

ಸುದ್ದಿ ಕನ್ನಡ ವಾರ್ತೆ

. ನವದೆಹಲಿ:ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ತಂಡವನ್ನು ಮುನ್ನಡೆಸಿದ್ದ, ದೀರ್ಘಕಾಲದಿಂದ ನಾಯಕಿಯಾಗಿದ್ದ ಹರ್ಮನ್ ಪ್ರೀತ್ ಕೌರ್ ಅವರು ಮೂರು ಮಾದರಿಯ ಕ್ರಿಕೆಟ್ ನ ನಾಯಕತ್ವ ತೊರೆಯುವ ನಿರ್ಧಾರ ಪ್ರಕಟಿಸಿದ ಹಿನ್ನೆಲೆಯಲ್ಲಿ ಸ್ಮೃತಿ ಮಂಧಾನ ಅವರನ್ನ ಭಾರತ ಮಹಿಳಾ ಕ್ರಿಕೆಟ್ ತಂಡದ ಹೊಸ ನಾಯಕಿಯಾಗಿ ಬಿಸಿಸಿಐ (BCCI) ಅಧಿಕೃತವಾಗಿ ನೇಮಕ ಮಾಡಿದೆ.

Banner Ad

​ಸ್ಮೃತಿ ಮಂಧಾನ ಅವರು ಇನ್ನುಮುಂದೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ (ಟೆಸ್ಟ್,ಏಕದಿನ ಮತ್ತು ಟಿ20) ಭಾರತ ತಂಡದ ಪೂರ್ಣಾವಧಿ ಸಾರಥ್ಯವನ್ನು ವಹಿಸಲಿದ್ದಾರೆ.

​ಇದರೊಂದಿಗೆ ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಯುಗ ಆರಂಭವಾಗಿದ್ದು, ಜಿಂಬಾಬ್ವೆ ವಿರುದ್ಧದ ಮುಂಬರುವ ಸರಣಿಯಿಂದ ಅವರ ನಾಯಕತ್ವದ ಪಯಣ ಆರಂಭವಾಗಲಿದೆ.

Banner Ad