Banner Ad

ಸುದ್ದಿ ಕನ್ನಡ ವಾರ್ತೆ
ಶಿರಸಿ: ಮನೆಗೆ ಬಟ್ಟೆ ವ್ಯಾಪಾರದ ನೆಪ‌ ಮಾಡಿಕೊಂಡು ವೃದ್ದೆಯ ಮಾಂಗಲ್ಯಸರ ಕಿತ್ತುಕೊಂಡು ಪರಾರಿಯಾಗಿದ್ದ ಈರ್ವರು ದರೋಡೆ ಕೋರರರನ್ನು ಬಂಧಿಸಿ ಜೈಲು ಕಂಬಿ ಎಣಿಸುವಂತೆ ಪೊಲೀಸರು ಮಾಡಿದ್ದಾರೆ.

ಬನವಾಸಿಯ ಶೈಲಾ ಆನಂದ‌ ಮಂಗಳೂರು (೭೬) ನೀಡಿದ ಪೊಲೀಸ್ ದೂರಿನ ಅನ್ವಯ ಕಾರ್ಯಾಚರಣೆ‌ ನಡೆಸಿದ ಶಿವಮೊಗ್ಗ ಗಾಡಿಕೊಪ್ಪದ ಚೇತನ ಪರಶುರಾಮ ಗಾಯಕವಾಡ (30) ಹಾಗೂ ಇದೇ ಊರಿನ ಜಿ ಎಸ್ ಕೆ ಎಮ್ ರಸ್ತೆಯ ಅರ್ಜುನ ಶ್ರೀರಾಮ ಶಿಂದೆ ಬಂಧಿತ ಆರೋಪಿಗಳಾಗಿದ್ದಾರೆ.

Banner Ad

ಕಳ್ಳತನಕ್ಕೆ ಬಳಸಿದ ಓಮಿನಿ ಕಾರು ಕಳ್ಳತನ ಮಾಡಿದ್ದ 22 ಗ್ರಾಂ ಮಾಂಗಲ್ಯ ಸರ ವಶಕ್ಕೆ ಪಡೆಯಲಾಗಿದೆ.
ಎಸ್ಪಿ ನಾರಾಯಣ ಎಂ ಮಾರ್ಗದರ್ಶನದಲ್ಲಿ ಡಿವಾಯಸ್ಪಿ ಗಣೇಶ ಕೆ ಎಲ್, ಸಿಪಿಆಯ್ ಶಶಿಕಾಂತ ವರ್ಮಾ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಪಿಎಸ್ಆಯ್ ಗಳಾದ ಚಂದ್ರಕಲಾ ಪತ್ತಾರ್, ಸುನಿಲಕುಮಾರ ಬಿ ವೈ, ಸಿಬ್ಬಂದಿಗಳಾದ ಚಂದ್ರಪ್ಪ ಕೊರವರ್, ಪ್ರಶಾಂತ, ಬಸವರಾಜ ಜಾಡರ್, ಮಂಜುನಾಥ ನಡುವಿನಮನಿ, ಮಂಜಪ್ಪ ಪಿ ಹಾಗು ಉದಯ ಗುನಗಾ ಪಾಲ್ಗೊಂಡಿದ್ದರು.

Banner Ad