ಸುದ್ದಿ ಕನ್ನಡ ವಾರ್ತೆ
. ಜಪಾನ್:ನಿಶ್ಶಿನ್ ಕೊರೋಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆದ ಏಷ್ಯನ್ ಗೇಮ್ಸ್‌ನ ಟಿ20 ಟೂರ್ನಿಯ ಪೈನಲ್ ಪಂದ್ಯದಲ್ಲಿ ಟೀ ಇಂಡಿಯಾ ಪುರುಷರ ತಂಡವು ಪಾಕಿಸ್ತಾನ ತಂಡವನ್ನು ಸೋಲಿಸುವ ಮೂಲಕ ಚಿನ್ನದ ಪದಕ ಪಡೆದುಕೊಂಡರೆ, ಪಾಕಿಸ್ತಾನ ತಂಡವು ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಚರು.
ಪಂದ್ಯದ ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯರ್ ಅಯ್ಯರ್ ಬ್ಯಾಟಿಂಗ್ ಆಯ್ದುಕೊಂಡ ನಂತರ ನಿಗದಿತ 20 ಓವರಗಳಲ್ಲಿ ಅಬಿಷೇಕ್ ಶರ್ಮಾ ಹಾಗೂ ತಿಲಕ್ ವರ್ಮಾ ಅವರ ಭರ್ಜರಿಯಾದ ಬಿರುಸಿನ ಅರ್ಧ ಶತಕಗಳ ನೆರವಿನಿಂದ 6 ವಿಕೆಟ್ ಗೆ 211 ರನ್ ಬೃಹತ್ತಾದ ಮೊತ್ತ ಕಲೆ ಹಾಕಿತು. 212 ರನ್ ಗಳ ಬೃಹತ್ತಾದ ಮೊತ್ತವನ್ನು ಬೆನ್ನತ್ತಿದ ಪಾಕಿಸ್ತಾನ ತಂಡವು 20 ಓವರಗಳಲ್ಲಿ 6 ವಿಕೆಟ್ ಗೆ 192 ರನ್ ಗಳಿಸಲಷ್ಟೇ ಶಕ್ತರಾಗಿ 19 ರನ್ ಗಳಿಂದ ಸೋಲನ್ನು ಅನುಭವಿಸಿದರು. ಸಂಕ್ಷಿಪ್ತ ಸ್ಕೋರ್:ಭಾರತ 20ಓವರ್ 211/6,ಪಾಕಿಸ್ತಾನ 20 ಓವರ್ 192/6. ಫಲಿತಾಂಶ ಟೀ ಇಂಡಿಯಾಕ್ಕೆ 19 ರನ್ ಗಳ ಜಯ.ಚಿನ್ನದ ಪದಕ.
