ಸುದ್ದಿ ಕನ್ನಡ ವಾರ್ತೆ
ಧಾರವಾಡ – ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ವತಿಯಿಂದ ನಡೆಯುತ್ತಿರುವ ಸುಧಾ ಪಾಟೀಲ ಅವರ 60ರ ಸಂಭ್ರಮದ ಅಭಿನಂದನಾ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 02 / 08 / 2026 ರಂದು ಬೆಳಿಗ್ಗೆ 10 ಗಂಟೆಗೆ ವಿದ್ಯಾವರ್ಧಕ ಸಂಘದ ಡಾ. ಪಾಟೀಲ್ ಪುಟ್ಟಪ್ಪ ಸಭಾಭವನ – ಧಾರವಾಡದಲ್ಲಿ ಜರುಗಲಿದೆ.

ಚಿಂತಕ ಮಹಾದೇವ ಹೊರಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುತ್ತಾರೆ. ಜಿ. ವಿ. ಕೊಂಗವಾಡ, ಐ.ಎ.ಎಸ್
( ನಿವೃತ್ತ) ಧಾರವಾಡ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು. ಡಾ. ಬಸವರಾಜ ಸಾದರ – ಸಾಹಿತಿಗಳು -ಚಿಂತಕರು ಬೆಂಗಳೂರು ಅವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಾರೆ.

ಸುಧಾ ಪಾಟೀಲ ಅವರ ಕೃತಿಗಳ ಬಿಡುಗಡೆಯನ್ನು ಡಾ. ಸುರೇಶ ಜಂಗಮಶೆಟ್ಟಿ ಕುಲಪತಿಗಳು -ಹಾವೇರಿ ವಿಶ್ವವಿದ್ಯಾಲಯ -ಹಾವೇರಿ ಮತ್ತು ಡಾ. ಚಂದ್ರಶೇಖರ ಗಾಣಿಗೇರ – ಕಾರ್ಯದರ್ಶಿ ಗಳು ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಅವರು ನಡೆಸಿಕೊಡುತ್ತಾರೆ .

ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಧಾರವಾಡ ಜಿಲ್ಲಾ ಘಟಕ ಉದ್ಘಾಟನೆಯನ್ನು ಡಾ. ಅಶೋಕ ಆಲೂರ -ಕುಲಪತಿಗಳು ಕೊಡಗು ವಿಶ್ವವಿದ್ಯಾಲಯ -ಕೊಡಗು ಅವರು ನೆರವೇರಿಸುತ್ತಾರೆ .

ಜೀವ ಸುಧೆ ಅಭಿನಂದನಾ ಕೃತಿ ಬಿಡುಗಡೆಯನ್ನು ಖ್ಯಾತ ಸಾಹಿತಿ ಪ್ರೊ. ಎಸ್‌. ಜಿ.ಸಿದ್ದರಾಮಯ್ಯ – ಖ್ಯಾತ ಚಿಂತಕರು – ಸಾಹಿತಿಗಳು- ಬೆಂಗಳೂರು ಅವರು ಮಾಡಲಿದ್ದಾರೆ .

ಡಾ. ಶಶಿಕಾಂತ ಪಟ್ಟಣ ಅಧ್ಯಕ್ಷರು -ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ -ಪುಣೆ, ಶರಣೆ ಸುಧಾ ಪಾಟೀಲ – ಸಾಹಿತಿಗಳು, ಬೆಳಗಾವಿ ವಿಶ್ವಸ್ಥರು -ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ,
ಪ್ರೊ.ಶಾರದಾ ಪಾಟೀಲ ವಿಶ್ವಸ್ಥರು- ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ- ಪುಣೆ, ಶರಣೆ ಸಿ.ಸಿ.ಹೇಮಲತಾ – ಅಧ್ಯಕ್ಷರು- ಅಕ್ಕನ ಮನೆ ಬೆಂಗಳೂರು, ಶೈಲಜಾ ಭಿoಗೆ ಸಂಸ್ಥಾಪಕರು -ಲಿಂಗಾಯತ ಮಹಿಳಾ ಸಮಾಜ ಬೆಳಗಾವಿ, ಡಾ. ಮೃತ್ಯುಂಜಯ ಶೆಟ್ಟರ ಖ್ಯಾತ ಹಿಂದೂಸ್ತಾನಿ ಗಾಯಕರು- ಧಾರವಾಡ, ಶರಣೆ ವಿಶ್ವೇಶ್ವರಿ ಹಿರೇಮಠ – ಕಾರ್ಯಕಾರಿ ಸದಸ್ಯರು ವಿದ್ಯಾವರ್ಧಕ ಸಂಘ -ಧಾರವಾಡ ಇವರೆಲ್ಲರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಸುಧಾ ಪಾಟೀಲ ಅವರ ಒಟ್ಟಾರೆ ಕೃತಿಗಳ ಪರಿಚಯವನ್ನು ಡಾ. ತಾರಾ. ಬಿ. ಎನ್ ಮತ್ತು ಡಾ. ಶರಣಮ್ಮ ಗೊರೆಬಾಳ ಅವರು ಮಾಡಲಿದ್ದಾರೆ.

ಕರ್ನಾಟಕದ ಬೇರೆ ಬೇರೆ ಊರಿನಿಂದ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಸಂಘಟನೆಗಳ ಕಾರ್ಯಕರ್ತರು, ಸದಸ್ಯರು ಪಾಲ್ಗೊಳ್ಳಲಿದ್ದಾರೆ.

ಸ್ವಾಗತ ಸಮಿತಿಯ ಅಧ್ಯಕ್ಷರಾದ ಪ್ರೊ. ಶಾರದಾ ಪಾಟೀಲ, ಸಂಪಾದಕರಾದ ಕುಸುಮಾ ದೀಪಕ ಚಂದ್ರ, ಸವಿತಾ ಪಾಟೀಲ, ಗುರುಪ್ರಸಾದ ಪಾಟೀಲ ಅವರು ಸಕಲರಿಗೂ ಕಾರ್ಯಕ್ರಮಕ್ಕೆ ಸ್ವಾಗತವನ್ನು ಕೋರಿದ್ದಾರೆ