Banner Ad

ಸುದ್ದಿ ಕನ್ನಡ ವಾರ್ತೆ
ಬೈಲಹೊಂಗಲ: ತಾಲ್ಲೂಕಿನ ಸಂಗೊಳ್ಳಿ ಗ್ರಾಮದ ಗಣ್ಯ ಮನೆತನದ ಈಗ ಕಿತ್ತೂರ ತಾಲ್ಲೂಕಿನ ಖೋದಾನಪುರ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನಬಿಸಾಬ ಇ ಖುದ್ದುನವರ ಅವರಿಗೆ ಬೆಳಗಾವಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ನಿಮಿತ್ತ ಕೇಂದ್ರ ಬಸವ ಸಮಿತಿಯ ವತಿಯಿಂದ ಬೈಲಹೊಂಗಲ ಪಟ್ಟಣದ ಗ್ಯಾಲಾಕ್ಸಿ ಗಾರ್ಡನದಲ್ಲಿ ಬೈಲಹೊಂಗಲ ಕ್ಷೇತ್ರ ಸಮನ್ವಯಾಧಿಕಾರಿಗಳಾದ ರವಿ ದುಂಡಯ್ಯ ಹಿರೇಮಠ (ಪಟ್ಟಿಹಾಳ) ಸನ್ಮಾನಿಸಿ ಮಾತನಾಡಿದ ಅವರು ಖುದ್ದುನವರ ಶಿಕ್ಷಕರು ಶ್ರದ್ಧೆಯಿಂದ, ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಅವರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತರಾಗಲೆಂದು ಶುಭ ಕೋರಿದರು.

 

Banner Ad

ಕೇಂದ್ರ ಬಸವ ಸಮಿತಿಯ ಹಿರಿಯ ನಿರ್ದೇಶಕರಾದ, ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಅವರು ಮಾತನಾಡಿ ನಬಿಸಾಬ ಇ ಖುದ್ದುನವರು ಕವಿ, ಕಥೆಗಾರ, ವಿಮರ್ಶಕರಾಗಿ, ಸಂಗೀತ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವರು ಎಂದರು.
ಖ್ಯಾತ ಉದ್ದಿಮೆದಾರರಾದ ಶಂಕರೆಪ್ಪ ಸೋಮಪ್ಪ ತಲ್ಲೂರ ( ಬುಡಶೆಟ್ಟಿ) ಅವರು ಮಾತನಾಡಿ ನಬಿಸಾಬ ಶಿಕ್ಷಕರು ತಮ್ಮ ಬಿಡುವಿನ ಸಮಯದಲ್ಲಿ ಸಿದ್ಧಾರೂಡ ಮಠದ ಸತ್ಸಂಗ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು ಇವರಿಗೆ ಉಜ್ವಲ ಭವಿಷ್ಯವಿದೆ ಎಂದರು

ಸನ್ಮಾನ ಸ್ವೀಕರಿಸಿದ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ನಬಿಸಾಬ ಇ ಖುದ್ದುನವರ ಅವರು ಮಾತನಾಡಿ ಶಾಲಾ ಸುಧಾರಣೆ ಸಮಿತಿಯ ಸದಸ್ಯರ, ಶಾಲೆಯ ಎಲ್ಲ ಶಿಕ್ಷಕರ ಮತ್ತು ಪಾಲಕರ ಉತ್ತಮ ಸಹಕಾರದಿಂದ ಈ ಪ್ರಶಸ್ತಿಯು ಲಭಿಸಿದೆ. ಈ ಪ್ರಶಸ್ತಿಯು ನನಗೆ ಇನ್ನು ಹೆಚ್ಚಿನ ಕೆಲಸ ನಿರ್ವಹಿಸುವ ಜವಾಬ್ದಾರಿ ಹೊತ್ತು ಮಕ್ಕಳ ಸೇವೆ ಸಲ್ಲಿಸುವೆ ಎಂದರು.
ಬೈಲಹೊಂಗಲ ತಾಲೂಕು ದೈಹಿಕ ಪರಿವೀಕ್ಷಕ ಶ್ರೀಶೈಲ ಫಕೀರಪ್ಪ ಕಡಾಡಿ, ಹೊಟೇಲ ಉದ್ದಿಮೆದಾರರಾದ ಸಂತೋಷ ಈಟಿ ಉಪಸ್ಥಿತರಿದ್ದರು.

Banner Ad