Banner Ad

ಸುದ್ದಿ ಕನ್ನಡ ವಾರ್ತೆ

ಜೊಯಿಡಾ ತಹಶೀಲ್ದಾರ್ ಮಂಜುನಾಥ್ ಮನ್ನೊಳ್ಳಿ ಅವರು ಸಹಾಯಕ ಕಮಿಷನರ್ ಆಗಿ ಪದೋನ್ನತಿ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Banner Ad

ಜೊಯಿಡಾ ತಹಶೀಲ್ದಾರ್ ರಾಗಿ ಅತ್ಯಂತ ಸರಳತನದಿಂದ ಸಾರ್ವಜನಿಕರನ್ನು ಕಂಡ ಹೆಮ್ಮೆಯ ಅಧಿಕಾರಿ ಆಗಿದ್ದವರು ಪದೋನ್ನತಿ ಪಡೆದಿರುವುದು, ಸಾರ್ವಜನಿಕರಿಗೆ ಸಂತಸ ತಂದಿದೆ. ಏನೇ ಕೆಲಸ ಕಾರ್ಯವಿದ್ದರೂ ಜನತೆಯನ್ನು ಪ್ರೀತಿಯಿಂದ ಕಂಡು ಉತ್ತಮವಾಗಿ ಸ್ಪಂದಿಸುವ ತಹಶೀಲ್ದಾರ್ ಮಂಜುನಾಥ್ ಮನ್ನೊಳ್ಳಿ ಅವರ ಕಾರ್ಯ ಜನತೆಯನ್ನು ಮೆಚ್ಚಿಸಿದೆ. ಜೊಯಿಡಾ ತಾಲೂಕಿನ ಎಲ್ಲವನ್ನೂ ಬಲ್ಲ ಅವರು ನಮ್ಮ ವ್ಯಾಪ್ತಿಯಲ್ಲಿಯೇ ಪದೋನ್ನತಿ ಪಡೆದು ಇರಲಿ ಎಂಬ ಹಾರೈಕೆ ಜೋಯಿಡಾ ಜನತೆಯದ್ದಾಗಿದೆ. ಅವರಿಗೆ ಇನ್ನೂ ಹೆಚ್ಚಿನ ಹುದ್ದೆ ದೊರೆಯಲಿ ಅವರಿಂದ ಜೋಯಿಡಾ ಕ್ಕೆ ಇನ್ನೂ ಹೆಚ್ಚಿನ ಅನುಕೂಲವಾಗಲಿ ಎಂದು ಜೊಯಿಡಾದ ಜನತೆ ಅವರನ್ನು ಅಭಿನಂದಿಸಿದ್ದಾರೆ.

Banner Ad