ಸುದ್ಧಿಕನ್ನಡ ವಾರ್ತೆ
ಪಣಜಿ: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇದರಿಂದಾಗಿ ಆನ್ ಲೈನ್ ವ್ಯವಹಾರಗಳು ಎಷ್ಟು ಸೇಫ್ …? ಎಂಬ ಆತಂಕ ಹೆಚ್ಚಾಗಿದೆ. ಆನ್ ಲೈನ್ ನಲ್ಲಿ ವಸ್ತುಗಳನ್ನು ಖರೀದಿಸುವವರೇ ಎಚ್ಚರ …ಎಚ್ಚರ ಎಚ್ಚರ. ಸ್ವಿಗ್ಗಿ (SWIGGY) ಗೋದಾಮಿನಲ್ಲಿ ನಕಲಿ ದಾಖಲೆ ಸೃಷ್ಠಿಸಿ ಭಾರಿ ಧರೋಡೆ ನಡೆಸಿದ ಘಟನೆ ಗೋವಾದಲ್ಲಿ ನಡೆದಿದೆ. ಹಾಗಿದೆ ಘಟನೆ ಏನು ಎಂಬುದಕ್ಕೆ ಈ ಸುದ್ಧಿ ಓದಿ.
ನಕಲಿ ನೋಂದಣಿ ಮೂಲಕ ಸ್ವಿಗ್ಗಿ ನೆಟ್ ವರ್ಕ ಲಿಮಿಟೆಡ್ ನ (SWIGGY NETWORK LIMITED) ಗೋದಾಮಿನಲ್ಲಿದ್ದ 93.38 ಲಕ್ಷ ರೂ ಸರಕನ್ನು ಅಲ್ಲಿನ ಉದ್ಯೋಗಿಗಳೇ ದೋಚಿದ ಆತಂಕಕಾರಿ ಘಟನೆ ಗೋವಾದ ವಾಸ್ಕೊ ಜುವಾರಿನಗರದದ ಸಾಂಕ್ವಾಳ್ ನಲ್ಲಿರುವ ಸ್ವಿಗ್ಗಿ ಗೋದಾಮಿನಲ್ಲಿ ನಡೆದಿದೆ. ಸರಕುಗಳನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ವೆರ್ಣಾ ಪೋಲಿಸರು 5 ಜನ ಸ್ವಿಗ್ಗಿ ಉದ್ಯೋಗಿಗಳ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.
ಈ ಘಟನೆಯಿಂದಾಗಿ ಆನ್ ಲೈನ್ ನಲ್ಲಿ ವಿವಿಧ ವಸ್ತುಗಳನ್ನು ಮುಂಗಡ ಹಣ ಪಾವತಿಸಿ ವಸ್ತು ಖರೀದಿಸುವ ಗ್ರಾಹಕರು ಈ ಘಟನೆಯಿಂದ ಬೆಚ್ಚಿ ಬಿದ್ದಿದ್ದಾರೆ. ಆನ್ ಲೈನ್ ಆರ್ಡರ್ ಗಳು ಎಷ್ಟು ಸೇಫ್ ಎಂದು ಇನ್ನೊಮ್ಮೆ ನಾವೇ ಪ್ರಶ್ನೆ ಮಾಡಿಕೊಳ್ಳುವ ಸಮಯ ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸ್ವಿಗ್ಗಿಯ ಹಿರಿಯ ದಾಸ್ತಾನು ಕಾರ್ಯನಿರ್ವಾಹಕ ಅಮಿತ್ ಉಠಾವಳೆ, ಮೇಲ್ವಿಚಾರಕ ರಿಷಬ್ ರಾಜ್, ದಾಸ್ತಾನು ಮೇಲ್ವಿಚಾರಕ ವೈಶಾಲಿ ಪಾಂಡೆ, ಲೋಡರ್ ಅಫ್ತಾಬ್, ಸೈಟ್ ಇನ್ ಚಾರ್ಜ ಸಹಾಯಕ ವ್ಯವಸ್ಥಾಪಕ ಆರಿಫ್ ಇಸಾನಿ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.
ಸ್ವಿಗ್ಗಿ ನೆಟ್ ವರ್ಕ ಲಿಮಿಟೆಡ್ ನ ಗೋದಾಮಿನ ಮುಖ್ಯಸ್ಥ ಆತಿಶ್ ಪಾಟೀಲ್ ರವರು ಪೋಲಿಸ್ ದೂರು ದಾಖಲಿಸಿದ್ದಾರೆ. ಮೇ 22 ರಿಂದ ಜುಲೈ 6 ರ ನಡುವೆ ಸ್ವಿಗ್ಗಿ ಗೋದಾಮಿನಲ್ಲಿ ಸರಕುಗಳನ್ನು ಸಂಗ್ರಹಿಸದಿದ್ದರೂ ಗೋದಾಮಿನ ನಿರ್ವಹಣಾ ವ್ಯವಸ್ಥೆಯಲ್ಲಿ ಸುಳ್ಳು ನಮೂದುಗಳನ್ನು ಮಾಡಲು ಸಂಚು ರೂಪಿಸಿದ್ದರು. ನಕಲಿ ದಾಖಲೆಗಳನ್ನು ಸೃಷ್ಠಿಸಿ ಅವುಗಳನ್ನು ನಿಜವಾದವು ಎಂದು ನಟಿಸುವ ಮೂಲಕ ಅವರು ಭಧ್ರತಾ ಸಿಬ್ಬಂಧಿಯನ್ನು ದಾರಿತಪ್ಪಿಸಿದ್ದರು ಎನ್ನಲಾಗಿದೆ.
ಸುಮಾರು 68,29,172 ರೂ ಮೌಲ್ಯದ ಸಿಗರೇಟ್ ಮತ್ತು ಸುಮಾರು 25,08,930 ರೂ ಮೌಲ್ಯದ ಮೊಬೈಲ್ ಪೋನ್ ಗಳು ಸೇರಿದಂತೆ ಒಟ್ಟೂ 93,38,102 ರೂ ಮೌಲ್ಯದ ಸರಕುಗಳನ್ನು ದೋಚಲಾಗಿದೆ ಎಂದು ತಿಳಿದುಬಂದಿದೆ.
